Saturday, April 19, 2025
Google search engine

Homeಅಪರಾಧಆಟೋ-ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು

ಆಟೋ-ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು

ಬೀದರ್: ಭಾಲ್ಕಿ ತಾಲೂಕಿನ ಚಿಕಲಚಂದಾ ಮರೂರ ರಸ್ತೆ ನಡುವೆ ಆಟೋ ಐಷರ್ ಟೆಂಪೋ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಭಾಲ್ಕಿಯ ನಿವಾಸಿ ನಾಗೇಶ್ ಕಾಂಬಳೆ (೩೦) ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಉದಗೀರ್ ಮೂಲದವರಾದ ಚಾಂಪಾಪಾಶ್ (೫೦) , ಶೇರಖಾನ್ (೩೮) ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಸಾನಿಯಾ, ನಾಜೀಯಾ, ಆಫ್ರೀನ್ ಹಾಗೂ ಅಲವೇರಾ ಅವರಿಗೂ ಗಾಯಗಳಾಗಿವೆ. ಆಟೋದಲ್ಲಿ ಮರೂರದಿಂದ ಭಾಲ್ಕಿಗೆ ತೆರಳುತ್ತಿದ್ದ ವೇಳೆ ಭಾಲ್ಕಿ ಕಡೆಯಿಂದ ಎದುರಿಗೆ ಬಂದ ಐಷರ್ ಟೆಂಪೋ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಈ ಕುರಿತು ಭಾಲ್ಕಿ ತಾಲೂಕಿನ ಧನ್ನೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular