ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) HD ಕೋಟೆ ಮತ್ತು ವಿವೇಕಾನಂದ ಸ್ಮಾರಕ ಆಸ್ಪತ್ರೆ ಸರಗೂರು ಇವರ ಸಂಯುಕ್ತಾಶ್ರಯದಲ್ಲಿ ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿ ವಲಯದ ಹುಯಂಬಳ್ಳಿ ಕಾರ್ಯಕ್ಷೇತ್ರದ ಮಾಗುಡಿಲು ಗ್ರಾಮದ ಭೂಮಿಕಾ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಕೃಷ್ಣಮೂರ್ತಿ, ವಿವೇಕಾನಂದ ಆಸ್ಪತ್ರೆ ವೈದ್ಯರಾದ ಡಾಕ್ಟರ್ ಅಭಿಷೇಕ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನಮ್ಮ ಗ್ರಾಮದ ಮುಖಂಡರಾದ ನಾಗೇಂದ್ರ ಹಾಗೂ ಸ್ಥಳೀಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮೇಡಂ, ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಜರಿದ್ದು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ವೈದ್ಯಾಧಿಕಾರಿಗಳಾದ ಅಭಿಷೇಕ ರವರು ಪ್ರಸ್ತುತ ದಿನಗಳಲ್ಲಿ ಬಿಪಿ, ಶುಗರ್ ಎನ್ನುವುದು ಈಗ ಸರ್ವೇಸಾಮಾನ್ಯವಾಗಿ ಬಿಟ್ಟಿದೆ ಮುಂಚೆ ಎಲ್ಲಾ ಹೀಗಿರಲಿಲ್ಲ ಉತ್ತಮ ಆರೋಗ್ಯವನ್ನು ಜನಸಾಮಾನ್ಯರು ಕಾಪಾಡಿಕೊಳ್ಳುತ್ತಿದ್ದರು ಆದರೆ ಈಗ ಹೆಚ್ಚಿನ ಜನರು ಹೊರಗಿನ ತಿಂಡಿಗಳನ್ನು ತಿನ್ನುವುದರಿಂದ ಹೆಚ್ಚಿನ ರುಚಿ ಬೇಕೆಂದು ರಾಸಾಯನಿಕಗಳನ್ನು ಬಳಸಿ ಅಡಿಗೆ ತಯಾರಿಸುವುದರಿಂದ ಮಿತಿ ಇಲ್ಲದೆ ಬೇಕಾಬಿಟ್ಟಿ ತಿನ್ನುವುದರಿಂದ ಆರೋಗ್ಯ ಹದಗೆಡುತ್ತಿದೆ ಮೊಬೈಲ್, ಟಿವಿ ನೋಡಿಕೊಂಡೆ ಊಟ ಮಾಡುವುದರಿಂದ ನಾವು ಏನು ತಿನ್ನುತ್ತಿದ್ದೇವೆ, ಎಷ್ಟು ತಿನ್ನುತ್ತಿದ್ದೇವೆ, ಎಂಬುದರ ಅರಿವಿರುವುದಿಲ್ಲ ಇದರಿಂದ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ನಾವು ಪ್ರಸ್ತುತ ದಿನಗಳಲ್ಲಿ ಗಮನಿಸುತ್ತಿದ್ದೇನೆ ಹೆಚ್ಚಿನ ಜನರಲ್ಲಿ ಅನಾರೋಗ್ಯ ಕಾಡುತ್ತಿದೆ ಸಾಮಾನ್ಯವಾಗಿ ಹೆಚ್ಚಿನ ರಾಸಾಯನಿಕಗಳನ್ನೂ ಬಳಸಿ ಆಹಾರವನ್ನು ಸೇವನೆ ಮಾಡುತ್ತಿರುವುದರಿಂದ ಹೆಚ್ಚಿನ ಜನರಿಗೆ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಕಾಯಿಲೆ ಬಂದಮೇಲೆ ಔಷಧಿ ಕೊಡುವುದಕ್ಕಿಂತ ಬರುವುದಕ್ಕೆ ಮುಂಚೆಯೇ ತಡೆಗಟ್ಟುವುದು ಅತ್ಯುತ್ತಮ ಎಂದು ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯಾಧಿಕಾರಿಗಳು ತಿಳಿಸಿದರು.
ನಂತರ ಮಾತನಾಡಿದ ಜ್ಞಾನವಿಕಾಸ ಸಮನ್ವಯಾಧಿಕಾರಿಯವರು ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯ ಎಂಬುವುದು ತುಂಬಾ ಮುಖ್ಯವಾಗಿರುತ್ತದೆ, ಮನುಷ್ಯರ ಪ್ರತಿಯೊಬ್ಬ ಮನುಷ್ಯರು ಆರೋಗ್ಯಕ್ಕೆ ಕಾಳಜಿ ವಹಿಸಬೇಕು ಆರೋಗ್ಯ ಚೆನ್ನಾಗಿದ್ದರೆ ಯಾವುದೇ ರೋಗಗಳು ಬರುವುದಿಲ್ಲ ಮನೆಯಲ್ಲಿ ಮಾಡುವಂತಹ ಆಹಾರ ಸೇವನೆ ಮಾಡಬೇಕು ಹೊರಗಿನ ತಯಾರಿಸಿದ ಆಹಾರವನ್ನು ತೆಗೆದುಕೊಳ್ಳಬಾರದೆಂದು ಆರೋಗ್ಯವೇ ಭಾಗ್ಯವೆಂದು ತಿಳಿಸಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ತಪಾಸಣೆ, ದಂತತಪಾಸಣೆ, ಕಿವಿ ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಕೊನೆಯಲ್ಲಿ ವಿವೇಕಾನಂದ ಆಸ್ಪತ್ರೆಯ ಸಿದ್ದರಾಜುರವರು ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. .