Friday, April 18, 2025
Google search engine

Homeಆರೋಗ್ಯಆರೋಗ್ಯ ತಪಾಸಣಾ ಶಿಬಿರ:ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ-ಡಾ. ಡಿ ನಟರಾಜ್ ಸಲಹೆ

ಆರೋಗ್ಯ ತಪಾಸಣಾ ಶಿಬಿರ:ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ-ಡಾ. ಡಿ ನಟರಾಜ್ ಸಲಹೆ

ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಅಸ್ತಮಾ ಮತ್ತು ಸಿ ಓ ಪಿ ಡಿ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಾಲೂಕು ಆರೋಗ್ಯ ಆಡಳಿತಾಧಿಕಾರಿ ಡಾ. ಡಿ ನಟರಾಜ್ ಸಲಹೆ ನೀಡಿದರು.

ಭೇರ್ಯ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ(ಪಿ.ಹೆಚ್.ಸಿ) ಆಸ್ಪತ್ರೆಯ ಆವರಣದಲ್ಲಿ ಅಸ್ತಮಾ ಮತ್ತು ಸಿ ಓ ಪಿ ಡಿ ಮೆಗಾ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಅಸ್ತಮಾ ಮತ್ತು ಸಿ ಓ ಪಿ ಡಿ ತಪಾಸಣ್ಣ ಶಿಬಿರವನ್ನು ಇದೇ ಪ್ರಪ್ರಥಮ ಬಾರಿಗೆ ಕೆಆರ್ ನಗರದ ಬೇರ್ಯ ಗ್ರಾಮದಲ್ಲಿ ಏರ್ಪಡಿಸಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಇತ್ತೀಚೆಗೆ ಯುವಕರಲ್ಲಿ ಅತಿ ಹೆಚ್ಚು ಹೃದಯಗತವಾಗುತ್ತಿದ್ದು ಇದನ್ನು ತಡೆಗಟ್ಟಬೇಕಾದರೆ ಅಸ್ತಮಾ ಮತ್ತು ದಮ್ಮು ಇರುವಂತ ವ್ಯಕ್ತಿಗಳು ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಗೆ ಒಳಗಾದರೆ ಹೆಚ್ಚು ಹೆಚ್ಚು ಹೃದಯಘಾತವಾಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು. ಯುವಕರು ವಯೋವೃದ್ಧರು ಎನ್ನದೆ ಹೃದಯಘಾತ ಹೆಚ್ಚುತಿರಲು ಕಾರಣ ವ್ಯಾಯಾಮ ಮಾಡದಿರುವುದು ಪೌಷ್ಟಿಕಾಂಶದ ಆಹಾರದ ಕೊರತೆ ಶುಚಿತ್ವ ಹಾಗೂ ಆರೋಗ್ಯದ ಕಡೆ ಗಮನ ನೀಡದಿರುವುದು ಇನ್ನಿತರ ಕಾರಣಗಳಿಂದ ಹೃದಯಘಾತ ಹೆಚ್ಚು ಸಂಭವಿಸುತ್ತಿದೆ ಇದನ್ನು ತಪ್ಪಿಸಬೇಕಾದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಹಾಗೂ ಸ್ಥಳೀಯ ಆಸ್ಪತ್ರೆಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ವಾಸಕೋಶ ತಜ್ಞರಾದ ಡಾ.ಮಂಜುನಾಥ್ ಡಾ. ಸೌಜನ್ಯ ನೇತೃತ್ವದಲ್ಲಿ ಅಸ್ತಮಾ ಮತ್ತು ಸಿ ಓ ಪಿ ಡಿ ಗಳ ಮೂಲಕ ಕೀ ನಿಂಗ್ ತಪಾಸಣೆ ಮಾಡಲಾಯಿತು.
ಅಸ್ತಮಕ್ಕೆ ಒಳಗಾಗಿದ್ದಂತ ಐವತ್ತು ಜನರಿಗೆ ಹಾಗೂ 50 ಜನರಿಗೆ ಹೆಚ್ಐವಿ ಪರೀಕ್ಷೆಗಳನ್ನು ಮಾಡಲಾಗಿದ್ದು ಹಾಜರಿದ್ದ ಎಲ್ಲರಿಗೂ ಉಚಿತ ಚಿಕಿತ್ಸೆ ಮತ್ತು ಔಷಧಿಯನ್ನು ನೀಡುವ ಮೂಲಕ ಮಾದರಿ ಆಗಿದ್ದಲ್ಲದೆ ಅಗತ್ಯವಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಶ್ವಾಸಕೋಶ ತಜ್ಞ ಡಾ.ಮಂಜುನಾಥ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೌಜನ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮಿಕೃಷ್ಣೇಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ಡಿಸೋಜಾ, ಪ್ರಯೋಗಾಲದ ಹಿರಿಯ ತಾಂತ್ರಿಕ ಅಧಿಕಾರಿ ಡಿ.ಎಸ್, ಪ್ರಕಾಶ್, ಸಿಬ್ಬಂದಿಗಳಾದ ಚೇತನ್, ಹೇಮಲತಾ ಸೇರಿದಂತೆ ಆರೋಗ್ಯ ಸಿಬ್ಬಂದಿಗಳು ಭೇರ್ಯ ಗ್ರಾಮದ ಮುಖಂಡರು ಮತ್ತು ತಪಾಸಣೆಗೆಂದು ಬಂದ ರೋಗಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular