ಮಡಿಕೇರಿ: ಪೋಷಣ್ ಮಸಾಚರಣೆ ಅಂಗವಾಗಿ ಹದಿಹರೆಯದ ಹೆಣ್ಣು ಮಕ್ಕಳು ಅಂಗನವಾಡಿ ಫಲಾನುಭವಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ರಕ್ತಹೀನತೆ ಪರೀಕ್ಷೆ ನಡೆಸಲಾಯಿತು.
ತಪಾಸಣಾ ಶಿಬಿರದಲ್ಲಿ ಗಾಂಧಿನಗರ, ಶಾಸ್ತ್ರಿನಗರ, ಬಾಡಗ-1, ಬಾಡಗ-2, ಕೋಡಂಬೂರು, ಕಾಂತೂರು, ಕಿಗ್ಗಾಲು, ಐಕೊಳ 1, ಐಕೊಳ 2, ಐಕೊಳ 3 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳು, ಡಾಕ್ಟರ್ ವಿಜಯಕುಮಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ಮುರ್ನಾಡು, ಹಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತ ಹೇಮಲತಾ, ಆರೋಗ್ಯ ಇಲಾಖೆಯ ಕಾಂಚನ, ಮೇಪಾಡಂಡ ಸವಿತಾ ಕೀರ್ತನ್ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ಹಾಜರಿದ್ದರು.