Sunday, April 20, 2025
Google search engine

Homeರಾಜ್ಯಸುದ್ದಿಜಾಲಡೆಂಗ್ಯೂ ,ಚಿಕುಂಗನ್ಯ ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಗೆಯ ಸಹಕಾರ ನೀಡಬೇಕು: ಆರೋಗ್ಯಾಧಿಕಾರಿ ಡಾ.ಡಿ.ನಟರಾಜು

ಡೆಂಗ್ಯೂ ,ಚಿಕುಂಗನ್ಯ ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆಗೆಯ ಸಹಕಾರ ನೀಡಬೇಕು: ಆರೋಗ್ಯಾಧಿಕಾರಿ ಡಾ.ಡಿ.ನಟರಾಜು

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಡೆಂಗ್ಯೂ ಮತ್ತು ಚಿಕುಂಗನ್ಯ ಜ್ವರ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ಡೆಂಗ್ಯೂ ಜ್ವರ ಮತ್ತು ಅದರಿಂದಾಗುವ ಅನಾಹುತಗಳ ಬಗ್ಗೆ ಪ್ರಾತ್ಯಕ್ಷತೆ ಹಾಗೂ ಪತ್ರಿಕಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡೆಂಗ್ಯೂ, ಮಲೇರಿಯಾ ಮತ್ತು ಚಿಕುಂಗುನ್ಯ ಸೇರಿದಂತೆ ಇತರ ಮಾರಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪತ್ರಕರ್ತರ ಸಹಕಾರ ಅಗತ್ಯವಾಗಿದ್ದು ತಾವುಗಳು ತಮ್ಮ ಪತ್ರಿಕೆಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮಗಳು ಮತ್ತು ಆರೋಗ್ಯ ಸೇವೆಯ ಬಗ್ಗೆ ಪ್ರಚಾರ ಪಡಿಸಬೇಕು ಎಂದು ಮನವಿ ಮಾಡಿದರು. ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಜನರಲ್ಲಿ ರೋಗಗಳ ನಿಯಂತ್ರಣ ಮಾಡುವ ಬಗ್ಗೆ ಅರಿವು ಮೂಡಿಸಲು ಕರ ಪತ್ರ ವಿತರಿಸುವುದರ ಜತೆಗೆ ಅಗತ್ಯ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಬೇಕು ಆಗ ಮಾತ್ರ ರೋಗಗಳು ಉಳ್ಬಣವಾಗುವುದನ್ನು ತಡೆಗಟ್ಟಲು ಸಾಧ್ಯ ಈ ಬಗ್ಗೆ ಸ್ಥಳೀಯ ಚುನಾಯಿತ ಸದಸ್ಯರು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಡೆಂಗ್ಯೂ ಜ್ವರ ಹರಡದಂತೆ ನೋಡಿಕೊಳ್ಳಲು ಮತ್ತು ಚಿಕಿತ್ಸೆ ಪಡೆಯಲು ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ಪರೀಕ್ಷೆಗಳಿಗೆ ರಿಯಾಯಿತಿ ದರ ನಿಗದಿ ಮಾಡಿದೆ ಇದರ ಸದ್ಬಳಕೆ ಮಾಡಿಕೊಂಡು ಅನುಮಾನ ಇದ್ದವರು ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದ ಡಾ.ನಟರಾಜ್ ಸಿಡುಬು, ಕಾನೆಕಾಲು, ಪೋಲೀಯೋ ರೀತಿಯಲ್ಲಿ ಈ ರೋಗವು ಸಂಪೂರ್ಣವಾಗಿ ನಿರ್ಮೂಲನೆಯಾಗುವಂತೆ ಮಾಡಲು ಆರೋಗ್ಯ ಇಲಾಖೆ ಸನ್ನದ್ದವಾಗಿದೆ ಎಂದರು.

ಡೆಂಗ್ಯೂ ಜ್ವರ ಮಳೆಗಾಲ ಬಂದಾಗ ಶುದ್ದವಾಗಿರುವ ನೀರಿನಿಂದ ಹರಡುತ್ತದೆ ರೋಗ ಹರಡಲು ಕಾರಣವಾದ ಸೊಳ್ಳೆಗಳನ್ನು ನಾಶಮಾಡಲು ಸಾರ್ವಜನಿಕರು ಆಗ್ಗಿಂದ್ದಾಗೆ ಕುಡಿಯುವ ನೀರು ಸೇರಿದಂತೆ ಸಂಗ್ರಹಣ ಮಾಡಿ ಹಿಡಲಾದ ನೀರನ್ನು ಬದಲಾವಣೆ ಮಾಡುವುದರ ಜತೆಗೆ ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು ಎಂದು ಸಲಹೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಅನುಮಾನವಿದ್ದಲ್ಲಿ ಸ್ಥಳೀಯ ಆಶಾ, ಅಂಗನವಾಡಿ ಕಾರ್ಯಕರ್ತರ ಸಹಕಾರ ಪಡೆಯಬೇಕೆಂದು ತಿಳಿಸಿದರು.

ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ಈವರೆಗೆ ೩೦ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು ೨೦೦ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಯಾವುದೇ ಸಾವು ಸಂಭವಿಸಿಲ್ಲ ಎಂದರಲ್ಲದೆ ಸಾವು ಆಗದಂತೆ ಎಚ್ಚರ ವಹಿಸಲಾಗಿದ್ದು ಈ ಸಂಬಂಧ ಶಾಲಾ ಕಾಲೇಜುಗಳು ಹಾಗೂ ಸಾರಿಗೆ ಸಂಸ್ಥೆಗಳಲ್ಲಿ ಇಲಾಖೆ ವತಿಯಿಂದ ಪ್ರಚಾರ ಮಾಡಲಾಗಿದೆ ಇದರ ಜತೆಗೆ ಆಶಾ ಕಾರ್ಯಕರ್ತೆಯವರಿಗೆ ಉತ್ತಮ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್‌ದೊಡ್ಡಕೊಪ್ಪಲು ಮಾತನಾಡಿ ಜುಲೈ ೧ರಂದು ಪತ್ರಿಕಾ ದಿನಾಚರಣೆ ಇರುವುದರನ್ನು ಅರಿತು ತಾಲೂಕು ಆರೋಗ್ಯಾಧಿಕಾರಿಗಳು ಪತ್ರಕರ್ತರನ್ನು ಆಹ್ವಾನಿಸಿ ಕೇಕ್ ಕತ್ತರಿಸುವ ಮೂಲಕ ಪತ್ರಿಕಾ ದಿನಾಚರಿಸಿದ್ದಲ್ಲದೆ ಎಲ್ಲಾ ಪತ್ರಕರ್ತರಿಗೂ ಭಗವದ್ಗೀತಾ ಪುಸ್ತಕ ವಿತರಣೆ ಮಾಡಿದ್ದಕ್ಕಾಗಿ ಡಾ.ಡಿ.ನಟರಾಜ್ ಅವರಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ಹಿರಿಯ ಆರೋಗ್ಯ ನಿರೀಕ್ಷ ಮಹೇಶ್, ಕೆ.ವಿ.ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular