Wednesday, April 16, 2025
Google search engine

Homeಅಪರಾಧಕಾನೂನುಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ: ಡಿ.6 ಕ್ಕೆ ಮುಂದೂಡಿಕೆ

ಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ: ಡಿ.6 ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಮಂಗಳವಾರ (ಡಿ.3ರಂದು) ಸಂಬಂಧ ಹೈಕೋರ್ಟ್‌ನಲ್ಲಿ ದರ್ಶನ್‌ & ಗ್ಯಾಂಗ್‌ನ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ.

ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌ ವಾದ ಮಂಡಿಸಿದ್ದಾರೆ. ಕಾರು ಚಾಲಕ ಲಕ್ಷ್ಮಣ್‌ ಪರ ವಕೀಲ ಅರುಣ್‌ ಶ್ಯಾಮ್‌ ವಾದ ಮಂಡಿಸಿದ್ದಾರೆ.

ದರ್ಶನ್‌ – ಪವಿತ್ರಾ ಲಿವಿನ್‌ ರಿಲೇಷನ್‌ನಲ್ಲಿದ್ದರು. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ನಿಂದ ಪವಿತ್ರಾ ಅವರಿಗೆ ಆಘಾತವಾಗಿತ್ತು. ಎ3 ಪವನ್‌ ಪವಿತ್ರಾ ಹಾಗೂ ದರ್ಶನ್‌ ಬಳಿ ಕೆಲಸಕ್ಕಿದ್ದ. ಏಪ್ರಿಲ್‌ ತಿಂಗಳಿನಲ್ಲಿ ಪವಿತ್ರಾ ಗೌಡ ರೇಣುಕಾ ಸ್ವಾಮಿ ನಂಬರ್‌ ಪಡೆದಿದ್ದಾರೆ. ಜೂನ್‌ ತಿಂಗಳಿನಿಂದ ಪವಿತ್ರಾ ಹೆಸರಿನಲ್ಲಿ ಪವನ್‌ ರೇಣುಕಾ ಸ್ವಾಮಿಗೆ ಮಸೇಜ್‌ ಮಾಡುತ್ತಿದ್ದ ಎಂದು ವಕೀಲರು ವಾದ ಮಂಡಿಸಿದ್ದಾರೆ.

ಪವಿತ್ರಾ ಗೌಡ ಅವರು ಒಂದು ಬಾರಿ ಮಾತ್ರ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ. ಪವಿತ್ರಾ ಗೌಡ ಚಪ್ಪಲಿ ಪಡೆದು ದರ್ಶನ್‌ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ. ಆ ಬಳಿಕ ಮನೆಗೆ ಕರೆದುಕೊಂಡು ಹೋಗಲಾಗಿದೆ. ಬಲವಂತವಾಗಿ ಅಪಹರಣ ಮಾಡಿದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವ ಅಂಶವನ್ನು ವಕೀಲರು ಹೇಳಿದ್ದಾರೆ.

ಪ್ರಕರಣದಲ್ಲಿ ಇಬ್ಬರು ಸಾಕ್ಷಿಗಳಿದ್ದಾರೆ. ಒಬ್ಬ ಪುನೀತ್‌ ಪ್ರತ್ಯಕ್ಷ ಸಾಕ್ಚಿ ಮತ್ತೊಬ್ಬರು ಪೂರಕ ಸಾಕ್ಷಿ ಎಂದು ವಕೀಲರು ಹೇಳಿದ್ದಾರೆ.

ಪವಿತ್ರ ಗೌಡ ಮಹಿಳೆ ಆಗಿದ್ದು, ಅಪರಾಧದ ಹಿನ್ನೆಲೆಯಿಲ್ಲ. ಮಹಿಳೆ ಎನ್ನುವ ಕಾರಣಕ್ಕೆ ಅನೇಕ ಪ್ರಕರಣದಲ್ಲಿ ಜಾಮೀನು ಸಿಕ್ಕ ಉದಾಹರಣೆಯಿದೆ. ಪತಿಯನ್ನೇ ಕೊಂದ ಪತ್ನಿಗೆ ಮಹಿಳೆ ಎನ್ನುವ ಕಾರಣಕ್ಕೆ ಜಾಮೀನು ಸಿಕ್ಕ ಉದಾಹರಣೆಗಳಿವೆ. ಪವಿತ್ರಾ ಗೌಡ ಅವರಿಗೆ 9ನೇ ತರಗತಿ ಓದುತ್ತಿರುವ ಮಗಳಿದ್ದಾರೆ. ಹಾಗಾಗಿ ಜಾಮೀನು ನೀಡಬೇಕೆಂದು ವಾದವನ್ನು ಅಂತ್ಯ ಮಾಡಿದ್ದಾರೆ.

ಆರೋಪಿಗಳ ಜಾಮೀನು ಅರ್ಜಿಯ ವಾದವನ್ನು ಆಲಿಸಿದ ಹೈಕೋರ್ಟ್‌ ಡಿ.6 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅದೇ ದಿನ ಪೊಲೀಸರ ಪರ ಎಸ್‌ ಪಿಪಿ ಪ್ರಸನ್ನ ಕುಮಾರ್‌ ಅವರಿಗೆ ತಮ್ಮ ವಾದವನ್ನು ಮಂಡಿಸಲು ಹೈಕೋರ್ಟ್‌ ಸೂಚನೆ ನೀಡಿದೆ

RELATED ARTICLES
- Advertisment -
Google search engine

Most Popular