ಮಂಗಳೂರು (ದಕ್ಷಿಣ ಕನ್ನಡ): ನಮ್ಮ ಕರಾವಳಿಯ ಪ್ರತಿಭೆ, ನಟ ರಿಷಬ್ ಶೆಟ್ಟಿಯವರಿಗೆ ಹಾರ್ದಿಕ ಅಭಿನಂದನೆಗಳು. “ಕಾಂತಾರ” ಚಿತ್ರಕ್ಕಾಗಿ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಅತ್ಯುತ್ತಮ ಮನೋರಂಜನಾ ಚಿತ್ರ ಪ್ರಶಸ್ತಿ ಪಡೆದ ನಿಮ್ಮ ಸಾಧನೆ ಬಗ್ಗೆ ಕರುನಾಡಿಗೆ ಹೆಮ್ಮೆಯಿದೆ. ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಮಂಗಳೂರು ಸಂಸದ ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ಇಂದು ಹೇಳಿಕೆ ನೀಡಿದ್ದಾರೆ.