ಕೆ.ಎನ್ ದೇವೇಂದ್ರ ಮತ್ತು ಅವರ ಪತ್ನಿ ಎಚ್. ಟಿ ರುಕ್ಮಿಣಿರವರಿಗೆ ಸನ್ಮಾನ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ :ಅತ್ಯಂತ ತೃಪ್ತಿದಾಯಕ ಹಾಗೂ ಗುರುತರವಾದ ಸೇವೆ ಶಿಕ್ಷಕ ಸೇವೆ ಅದನ್ನು ಯಶಸ್ವಿಯಾಗಿ ನಿರ್ವಹಿಸಿ ನಿವೃತ್ತಿಯಾಗುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಕೃಷ್ಣಪ್ಪ ತಿಳಿಸಿದರು.
ಪಟ್ಟಣಕ್ಕೆ ಸಮೀಪ ಬೀರನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 27 ವರ್ಷಗಳ ಸೇವೆ ಸಲ್ಲಿಸಿ ವಯೋನಿವೃತ್ತಿಯಾಗುತ್ತಿರುವ ಕೆ.ಎನ್ ದೇವೇಂದ್ರ ಮತ್ತು ಅವರ ಪತ್ನಿ ಎಚ್. ಟಿ ರುಕ್ಮಿಣಿ ರವರನ್ನು ಸನ್ಮಾನಿಸಿ ಮಾತನಾಡಿದ ಅವರು ವಯೋ ನಿವೃತ್ತಿ ಸಹಜ ಆದರೆ ಅವರ ಸೇವಾ ಅವಧಿಯಲ್ಲಿ ಮಾಡಿದಂತ ಒಳ್ಳೆಯ ಕೆಲಸಗಳು ಜೊತೆಯಲ್ಲಿ ಇರುತ್ತದೆ ಎಂಬುದಕ್ಕೆ ಇಂದು ಅವರನ್ನು ಅದ್ದೂರಿಯಾಗಿ ಬಿಳ್ಕೊಡುತ್ತಿರುವ ಸಮಾರಂಭವೇ ಸಾಕ್ಷಿಯಾಗಿದೆ ಎಂದರು.
ಕೆ. ಎನ್ ದೇವೇಂದ್ರರವರು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಸ್ನೇಹ ಬಳಗ ಸೇರಿದಂತೆ ಇನ್ನಿತರ ಸಂಘಗಳ ಸದಸ್ಯರಾಗಿದ್ದರು ನೌಕರರ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಎತ್ತಿದ ಕೈ ಹಾಗೂ ಅವರು ಯಾರ ಮೇಲೊಬ್ಬರ ಮೇಲೆ ದೂರು ಹೇಳುವುದು ಅಥವಾ ಅಹಂಕಾರ ಅಧಿಕಾರದ ಅಹಂನಿಂದ ವರ್ತಿಸಿರಲಿಲ್ಲ ಅವರ ಸೌಮ್ಯ ಸ್ವಭಾವದ ವ್ಯಕ್ತಿತ್ವ ಯುವ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ನಿವೃತ್ತ ಬಿಇಓ ರಾಜು ರವರು ಮಾತನಾಡಿ ಬೇರೆ ಇಲಾಖೆಯ ನೌಕರರಿಗಿಂತ ಶಿಕ್ಷಣ ಇಲಾಖೆಯ ನೌಕರರು ಮತ್ತು ಶಿಕ್ಷಕರ ಸೇವೆ ಅತ್ಯಂತ ಶ್ರೇಷ್ಠವಾದದ್ದು ಎಲ್ಲಾ ಇಲಾಖೆಗಳಿಗಿಂತ ದೊಡ್ಡ ಇಲಾಖೆಯಾದ ಶಿಕ್ಷಣ ಇಲಾಖೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವುದು ನಿಜ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲದೆ ಬೆಳಗಿನಿಂದ ಸಾಯಂಕಾಲದವರಿಗೆ ಕರ್ತವ್ಯ ನಿರ್ವಹಿಸಿ ಮನೆಗೆ ಬರುವ ಇಲಾಖೆ ಯಾವುದಾದರೂ ಒಂದು ಇಲಾಖೆ ಇದೆ ಎಂದರೆ ಅದು ಶಿಕ್ಷಣ ಇಲಾಖೆ ಇದನ್ನು ಎದೆ ತಟ್ಟಿ ಹೇಳಬಹುದು ಎಂದು ತಿಳಿಸಿದರು.
ಶಿಕ್ಷಕರು ಸೇವಾ ಅವಧಿಯಲ್ಲಿ ಮಾಡಿದ ಸಂಪಾದನೆ ಎಂದರೆ ಶಿಷ್ಯ ವರ್ಗ ಒಬ್ಬ ಶಿಕ್ಷಕನ ಶಿಷ್ಯರು ಐಎಎಸ್ – ಐಪಿಎಸ್ ಅಧಿಕಾರಿಗಳಿಂದ ಹಿಡಿದು ರಾಜಕಾರಣಿ ಸೇರಿದಂತೆ ಉನ್ನತ ಕ್ರೀಡಾಪಟುಗಳನ್ನು ತಯಾರು ಮಾಡುವ ಶಕ್ತಿ ಶಿಕ್ಷಕ ವರ್ಗಕ್ಕೆ ಇದೆ ಆದ್ದರಿಂದಲೇ ಅತ್ಯಂತ ಶ್ರೇಷ್ಠ ಪ್ರಾಮಾಣಿಕ ಇಲಾಖೆ ಎಂದರೆ ಶಿಕ್ಷಣ ಇಲಾಖೆ ಎನ್ನುವುದು ಎಂದು ವರ್ಣಿಸಿದರು.
ಪ್ರಾಮಾಣಿಕ ಶಿಕ್ಷಕ ಮತ್ತು ನೌಕರ ಅಯ್ಯೋ ನಿವೃತ್ತಿಯಾಗಿ ಮನೆಯಲ್ಲಿ ಕಾಲ ಕಳೆಯುವುದು ಬಹಳ ಕಷ್ಟದ ಕೆಲಸ ಆದರೆ ಸರ್ಕಾರ ನಿವೃತ್ತರಾಗುವ ನಮಗೆ ಸಾಕಷ್ಟು ವೇತನವನ್ನು ನೀಡುತ್ತಿರುವುದರಿಂದ ನಿವೃತ್ತರಾದ ನಮಗೆ ಇಲಾಖೆಯಲ್ಲಿ ಸ್ವಲ್ಪ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಜೆಡಿಎಸ್ ವಕ್ತಾರ ಕೆಎಲ್ ರಮೇಶ್ ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ ಪಿ ನಂದೀಶ್ ಬಿ ಆರ್ ಸಿ ವೆಂಕಟೇಶ್ ಅಕ್ಷರ ದಾಸೋಹ ಅಧಿಕಾರಿ ಪ್ರದೀಪ್ ಕುಮಾರ್ ಬೀರನಹಳ್ಳಿ ಶಾಲಾ ಮುಖ್ಯ ಶಿಕ್ಷಕಿ ಜೋಸ್ಪಿನ್ ಮೇರಿ ರಾಯಪ್ಪ ಸಿಆರ್‌ಪಿ ಮಮತಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರೇಗೌಡ ಸಿಆರ್‌ಪಿ ಈಶ್ವರ್ ಶಿಕ್ಷಕರುಗಳಾದ ಮಧುನಹಳ್ಳಿ ರಾಜು ನಾಗೇಶ್ ಹರೀಶ್ ಗಂಗಾಧರ್ ದಿವಾಕರ್ ಮನೋಹರ್ ರಂಗಣ್ಣ ದೊಡ್ಡ ಕೊಪ್ಪಲ್ ರಾಜು ಸೋಮಶೇಖರ್ ವೆಂಕಟೇಶ್ ಕುಮಾರ್ ಅಭಿ ರಾಯಪ್ಪ ಸುಜಾತ ಸೇರಿದಂತೆ ನೂರಾರು ಜನ ಶಿಕ್ಷಕರು ಸಿಬ್ಬಂದಿಗಳು ಗ್ರಾಮದ ಮುಖಂಡರು ಸಲ ಅಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.