ಮಂಗಳೂರು (ದಕ್ಷಿಣ ಕನ್ನಡ): ಕರಾವಳಿ ಭಾಗದಲ್ಲಿ ಮತ್ತೆ ಮಳೆ ಬಿರುಸು ಪಡೆದಿದೆ. ಇಂದಿನಿಂದ ಸೆಪ್ಟೆಂಬರ್ ೧೦ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಇಂದು. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಉತ್ತಮ ಮಳೆ ಸುರಿಯಿತು. ಉಳಿದಂತೆ ಮೋಡ ಕವಿದ ವಾತಾವರಣ ಇತ್ತು. ನಿನ್ನೆ ಮಂಗಳೂರಿನಲ್ಲಿ ೨೮.೮ ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ ೦.೭ ಡಿ.ಸೆ. ಕಡಿಮೆ ಮತ್ತು ೨೩.೫ ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ ೦.೩ ಡಿ.ಸೆ. ಏರಿಕೆ ಕಂಡಿತ್ತು.