Monday, April 21, 2025
Google search engine

Homeವಿದೇಶದುಬೈನಲ್ಲಿ ಭಾರಿ ಮಳೆ : ಜಲಾವೃತವಾದ ವಿಮಾನ ನಿಲ್ದಾಣ

ದುಬೈನಲ್ಲಿ ಭಾರಿ ಮಳೆ : ಜಲಾವೃತವಾದ ವಿಮಾನ ನಿಲ್ದಾಣ

ದುಬೈ: ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಬಿಸಿಲ ಬೇಗೆಯಿರುತ್ತಿದ್ದ ಸಂಯುಕ್ತ ಅರಬ್ ಸಂಸ್ಥಾನವು ಸುರಿದ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಜಗತ್ತಿನ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಯಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳವಾರದ ಮಳೆಗೆ ಬಹುತೇಕ ಮುಳುಗಡೆಗೊಂಡ ಪರಿಣಾಮ ವಿಮಾನ ಹಾರಾಟದಲ್ಲಿ ಸಂಪೂರ್ಣ ವ್ಯತ್ಯಯವುಂಟಾಯಿತು.

ಇಲ್ಲಿ ಯಾವುದೇ ವಿಮಾನ ಹಾರಾಟವಿರಲಿಲ್ಲ. ವಿಮಾನ ಸಂಚಾರ ಪುನರಾರಂಭಗೊಂಡರೂ ವಿಳಂಬಗಳು, ರದ್ದತಿಗಳಿಂದ ಪ್ರಯಾಣಿಕರು ಪರದಾಡಬೇಕಾಯಿತು ಎಂದು ವರದಿಯಾಗಿದೆ. ವಿಮಾನ ನಿಲ್ದಾಣದ ಹೊರತಾಗಿ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್‌ನಲ್ಲೂ ಮೊಣಕಾಲಿನವರೆಗೆ ನೀರು ತುಂಬಿತ್ತು. ಒಂದು ದುಬೈ ಮೆಟ್ರೋ ಸ್ಟೇಷನ್ ಕೂಡ ದಿಡೀರ್ ನೆರೆಯಿಂದ ಸಮಸ್ಯೆಗೀಡಾಯಿತು. ಹಲವು ರಸ್ತೆಗಳು ಜಲಾವೃತಗೊಂಡಿದ್ದರೆ, ವಸತಿ ಕಟ್ಟಡಗಳೂ ಸಮಸ್ಯೆ ಎದುರಿಸಿದವು. ದೀಢೀರ್ ಎಂದು ಸುರಿದ ಮಹಾಮಳೆಗೆ ಕಟ್ಟಡಗಳಲ್ಲಿ ಸೋರಿಕೆ ಸಮಸ್ಯೆಯೂ ವರದಿಯಾಗಿದೆ.

RELATED ARTICLES
- Advertisment -
Google search engine

Most Popular