Tuesday, April 8, 2025
Google search engine

Homeರಾಜ್ಯಬೆಂಗಳೂರು, ಕರಾವಳಿ ಸೇರಿದಂತೆ ಹಲವೆಡೆ ಆಗಸ್ಟ್ 12ರವರೆಗೆ ಭಾರಿ ಮಳೆ

ಬೆಂಗಳೂರು, ಕರಾವಳಿ ಸೇರಿದಂತೆ ಹಲವೆಡೆ ಆಗಸ್ಟ್ 12ರವರೆಗೆ ಭಾರಿ ಮಳೆ

ಬೆಂಗಳೂರಿನಲ್ಲಿ ಸೋಮವಾರದಿಂದ ಮಳೆ ಆರಂಭವಾಗಿದೆ. ಇಂದಿನಿಂದ ಆಗಸ್ಟ್​ 12ರವರೆಗೂ ರಾಜ್ಯದ ಬಹುತೇಕ ಕಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ,ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಕುಂದಾಪುರ, ಹೊನ್ನಾವರ, ಗೇರುಸೊಪ್ಪ, ಶಿರಾಲಿ, ಕದ್ರಾ, ಉಡುಪಿ, ಕ್ಯಾಸಲ್​ರಾಕ್, ಆಗುಂಬೆ, ಸಿದ್ದಾಪುರ, ಕುಮಟಾ, ಕೋಟ, ಗೋಕರ್ಣ, ಲಿಂಗನಮಕ್ಕಿ, ಕಾರವಾರ, ಕಾರ್ಕಳ, ಶೃಂಗೇರಿ, ಯಲ್ಲಾಪುರ, ಬೆಳ್ತಂಗಡಿ, ಉಪ್ಪಿನಂಗಡಿ, ಸಿದ್ದಾಪುರ, ಜಯಪುರದಲ್ಲಿ ಮಳೆಯಾಗಿದೆ. ಆನವಟ್ಟಿ, ಪುತ್ತೂರು, ಮುಂಡಗೋಡು, ಮಾಣಿ, ಹಾವೇರಿ, ಔರಾದ್, ಹುಂಚದಕಟ್ಟೆ, ಕೊಪ್ಪ, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ಇಂದು ಸಂಜೆ ವೇಳೆಗೆ ಮಳೆಯಾಗುವ ನಿರೀಕ್ಷೆ ಇದೆ.

RELATED ARTICLES
- Advertisment -
Google search engine

Most Popular