ಮಂಗಳೂರು (ದಕ್ಷಿಣ ಕನ್ನಡ) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ದಕ್ಷ ಕನ್ನಡದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.
ಅದರಲ್ಲುಯ್ ಮಂಗಳೂರಿನಲ್ಲಿ ಇಂದು ಸುರಿದ ಬಾರಿ ಮಳೆಗೆ ಕುಳೂರು ಬಳಿಯ ಬಸ್ ನಿಲ್ದಾಣ ಜಲಾವೃತಗೊಂಡು ಜನರು ಪರದಾಡಿದ್ರು. ಜೊತೆಗೆ ಮಂಗಳೂರಿನ ಪಡೀಲ್‌ನಲ್ಲಿಐದು ದಿನಗಳ ಹಿಂದಷ್ಟೇ ಲೋಕಾರ್ಪಣೆಗೊಂಡಿರುವ ನೂತನ ಜಿಲ್ಲಾಡಳಿತ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದ ಎದುರಿನ ಮುಖ್ಯ ರಸ್ತೆಯು ಭಾರೀ ಸುರಿದ ಮಳೆಗೆ ಹೊಳೆಯಂತಾಗಿತ್ತು.