Sunday, May 25, 2025
Google search engine

Homeರಾಜ್ಯಸುದ್ದಿಜಾಲದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಮನೆಗಳು ಕುಸಿತ, ಸ್ಥಳಕ್ಕೆ ಅಧಿಕಾರಿಗಳ ಭೇಟಿ

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಮನೆಗಳು ಕುಸಿತ, ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಮಂಗಳೂರು ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗಾಳಿ ಸಹಿತ ಮಳೆ ಸುರಿತಿದೆ. ಮಂಗಳೂರು ನಗರದ ಶಕ್ತಿನಗರದಲ್ಲಿ ರಾಜೀವಿ ಶೆಟ್ಟಿ ಎಂಬುವವರ ಮನೆ ಅತಿಯಾದ ಮಳೆಯಿಂದ ಕುಸಿದು ಬಿದ್ದುದೆ. ಸ್ಥಳಕ್ಕೆ ಇಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಅವರು ಭೇಟಿ ನೀಡಿ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ತಿಳಿಸಿದರು.

ಇನ್ನು ಬೆಳ್ತಂಗಡಿ ತಾಲೂಕಿನಾದ್ಯಂತ ಶನಿವಾರ  ಭಾರೀ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು ಇಂದು ಮಳೆಯ ತೀವ್ರತೆ ಹೆಚ್ಚಾಗಿದೆ. ಭಾರೀ ಮಳೆಗೆ ಪಾರೆಂಕಿ ಗ್ರಾಮದ ಹುಪ್ಪ ಎಂಬಲ್ಲಿನನಿವಾಸಿ ನಝೀರ್ ಎಂಬವರ ಮನೆಯ ಪಕ್ಕದ ತಡೆಗೋಡೆ ಕುಸಿದು ಬಿದ್ದಿದ್ದು ಮನೆಯ ಸುತ್ತ ಮಣ್ಣು ತುಂಬಿಕೊಂಡಿದೆ. ಸಮೀಪದ ಮನೆಗಳಿಗೂ ಸಮಾಸ್ಯೆಯುಂಟಾಗಿದೆ ಘಟನಾ ಸ್ಥಳಕ್ಕೆ  ಇಲಾಖಾಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular