ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಬ್ಬಾಳು
ಗ್ರಾಮದ ಹೆಚ್.ಹೆಚ್.ನಾಗೇಂದ್ರ ಮತ್ತು ಉಪಾಧ್ಯಕ್ಷರಾಗಿ ಚರ‍್ನಹಳ್ಳಿ ಗ್ರಾಮದ ಸಿ.ಎಂ.ರಾಜೇಶ್
ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಹೆಚ್.ಆರ್.ಬಾಲಕೃಷ್ಣ ಅವರನ್ನು ನಿರ್ದೇಶಕರು ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಳಿಸಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸಂಘದ ಆಡಳಿತ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಅವಿನಾಶ್ ಆಯ್ಕೆ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ಸದಸ್ಯರಾದ ಹೆಚ್.ಕೆ.ಮಂಜುನಾಥ್, ಸಿ.ಆರ್.ಶಿವಪ್ರಕಾಶ್,
ಹೆಚ್.ಕೆ.ಧನಂಜಯ್, ರಾಮಚಂದ್ರನಾಯಕ, ಎನ್.ಪಿ.ಪ್ರಸನ್ನ, ಕೇಬಲ್ ರವಿ, ಶಶಿಕಲಾ, ರೂಪ, ಹೆಚ್.ಎಸ್.
ರವಿಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಉಮೇಶ್, ಸಂಘದ ಸಿಒಇ ಚಂದ್ರಶೇಖರ್ ಹಾಜರಿದ್ದರು.
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಹೆಬ್ಬಾಳು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸಂತೋಷ್, ಸ್ವಾಮಿಗೌಡ, ಗ್ರಾಪಂ. ಸದಸ್ಯ ವೆಂಕಟರಾಮು, ಮುಖಂಡರಾದ ರಾಘವೇಂದ್ರ, ಪಾಲಾಕ್ಷ, ಯೋಗೇಶ್, ಚಂದ್ರಶೇಖರ್ ಇದ್ದರು.