ಹುಣಸೂರು ಫೆ.16.:ಹುಣಸೂರು ತಾಲೂಕು ಹನಗೂಡು ಹೋಬಳಿ ಹೆಮ್ಮಿಗೆ ಹಾಡಿಯಲ್ಲಿ ನೆನ್ನೆ ಸಂಜೆ ಕಣಿಯಪ್ಪ ಮತ್ತು ಚಿಕ್ಕಮಾದಯ್ಯ ಇವರು ವಾಸವಿದ್ದ ಎರಡು ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು.
ಇದನ್ನು ರೋಟರಿ ಅಧ್ಯಕ್ಷರ ಗಮನಕ್ಕೆ ತಂದ ಗ್ರಾಮಾಂತರ ಸಿ.ಪಿ.ಐ. ಮುನಿಯಪ್ಪ ಮನೆ, ಮಠ ಕಳೆದುಕೊಂಡ ನಿರಾಶ್ರಿತರಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು.
ಅದನ್ನು ಮನಗೊಂಡ ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ. ಕಾರ್ಯದರ್ಶಿ ಹೆಚ್.ಆರ್.ಕೃಷ್ಣ ಕುಮಾರ್ , ಗುಡಿಸಲುಗಳನ್ನು ಕಳೆದುಕೊಂಡ ಎರಡು ಕುಟುಂಬಗಳಿಗೆ ಆಹಾರ ಸಾಮಗ್ರಿ, ಬಟ್ಟೆ, ಚಾಪೆ ಮತ್ತು ಹೊದಿಕೆ ಹಾಗೂ ಅಡಿಗೆಯ ಪಾತ್ರೆಗಳನ್ನು ಹುಣಸೂರು ರೋಟರಿ ಕ್ಲಬ್ ವತಿಯಿಂದ ನೀಡುವ ಮೂಲಕ ಮಾನವಿಯತೆ ಮರೆದಿದ್ದು, ಶಾಸಕರ ಗಮನಕ್ಕೆ ತಂದು ತಲಾ 10.ಸಾವಿರ ಕೊಡಿಸಿದ್ದಾರೆ.
ಈ ಸಂದರ್ಭದಲ್ಲಿ ಹುಣಸೂರು ರೋಟರಿ ಕ್ಲಬ್ ನ ಚೆನ್ನಕೇಶವ, ಶಾಮಣ್ಣ, ಸಂತೋಷಕುಮಾರ್, ಹಾಗೂ ಮನೆ ಕಳೆದುಕೊಂಡ ಚಿಕ್ಕ ಮಾದಯ್ಯ ಇದ್ದರು.