Wednesday, April 9, 2025
Google search engine

Homeರಾಜಕೀಯಬಿಜೆಪಿಯಿಂದ ಕಾರ್ಯಕರ್ತರಿಗಾಗಿ ಸಹಾಯವಾಣಿ ನಂಬರ್ ಬಿಡುಗಡೆ

ಬಿಜೆಪಿಯಿಂದ ಕಾರ್ಯಕರ್ತರಿಗಾಗಿ ಸಹಾಯವಾಣಿ ನಂಬರ್ ಬಿಡುಗಡೆ

ಬೆಂಗಳೂರು: ತಮ್ಮ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ಕಾನೂನು ದೌರ್ಜನ್ಯ ನಡೆಸುವ ಸಾಧ್ಯತೆ ಇರುವುದರಿಂದ ಪ್ರತಿಪಕ್ಷ ಬಿಜೆಪಿ 24/7 ಸಹಾಯವಾಣಿಯನ್ನು ಆರಂಭಿಸಿದೆ. ಬಿಜೆಪಿ ಕಾರ್ಯಕರ್ತರಿಗೆ ಏನಾದರೂ ತೊಂದರೆಯಾದರೆ, ಈ ಸಹಾಯವಾಣಿ ನಂ. 18003091907 ಕರೆ ಮಾಡಬಹುದಾಗಿದೆ.
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಸಹಾಯವಾಣಿ ನಂಬರ್ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಹೋರಾಟದ ಮೂಲಕವೇ ಬಿಜೆಪಿ ಈ ಹಂತಕ್ಕೆ ಬಂದು ನಿಂತಿದೆ. ಹಿಂದಿನಿಂದಲೂ ಈ ಪಾರ್ಟಿಯನ್ನು ದಮನ ಮಾಡಲು ಯತ್ನಿಸಿದರು. ಯಾವುದೇ ಕಾರಣಕ್ಕೂ ನಾವು ವಿಶ್ವಾಸ ಕಳೆದುಕೊಳ್ಳಲ್ಲ. ಈ ಸರ್ಕಾರ, ಪೊಲೀಸ್ ಬಳಸಿ ದೌರ್ಜನ್ಯ ಎಸಗಿದರೆ ಸಹಾಯವಾಣಿ ನಂಬರ್ಗೆ ಕರೆ ಮಾಡಿ, ನಮ್ಮ ವಕೀಲರು ನಿಮ್ಮ ಸಹಾಯಕ್ಕೆ ಬರುತ್ತಾರೆ ಎಂದರು.
ಬಿಜೆಪಿ ಕಾರ್ಯಕರ್ತರ ಹಕ್ಕುಗಳ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸೋದಾಗಿ ಹೇಳಿದ್ದೆವು. ಕಾನೂನು ರಕ್ಷಣೆಗೆ ನೂರಕ್ಕೂ ಹೆಚ್ಚು ವಕೀಲರು ಮುಂದೆ ಬಂದಿದ್ದಾರೆ. ದ್ವೇಷದ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿಶೀಟ್ ಓಪನ್ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿರುವವರಿಗಾಗಿ ಈ ಸಹಾಯವಾಣಿ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಫೇಸ್ ಬುಕ್ ನಲ್ಲಿ ಮುಖ್ಯಮಂತ್ರಿ ಅವರ ಕಾರ್ಯವೈಖರಿ ಟೀಕಿಸಿದ್ದಕ್ಕೇ ಪ್ರಕರಣ ದಾಖಲಿಸಲಾಯಿತು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ. ಈ ಸರ್ಕಾರದ ಕೆಲವು ಮಂತ್ರಿಗಳು ನೈತಿಕ ಪೊಲೀಸ್ ಗಿರಿ ಸಹಿಸೋದಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದ ಗೃಹ ಮಂತ್ರಿಗಳೇ ಕರಾವಳಿ ಭಾಗದಲ್ಲಿ ಟಾಸ್ಕ್ ಫೋರ್ಸ್ ರಚಿಸುತ್ತೇವೆ ಅಂದಿದ್ದಾರೆ. ಇದೆಲ್ಲ ದ್ವೇಷ ರಾಜಕಾರಣ ಮುನ್ಸೂಚನೆ. ಹೀಗಾಗಿ ನಾವು ಎದೆಗುಂದದೆ ಪೊಲೀಸ್ ಸ್ಟೇಷನ್ ಒಳಗಡೆ, ಕೋರ್ಟಿನಲ್ಲಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠ ಚಾಲಕ ಯೋಗೇಂದ್ರ ಹೂಡಘಟ್ಟ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular