Monday, April 21, 2025
Google search engine

Homeಸಿನಿಮಾʼಕಾಂತಾರ ಪ್ರೀಕ್ವೆಲ್‌ʼ ಸಿನಿಮಾದಲ್ಲಿ ನಟಿಸಲು ಇಲ್ಲಿದೆ ಸುವರ್ಣಾವಕಾಶ

ʼಕಾಂತಾರ ಪ್ರೀಕ್ವೆಲ್‌ʼ ಸಿನಿಮಾದಲ್ಲಿ ನಟಿಸಲು ಇಲ್ಲಿದೆ ಸುವರ್ಣಾವಕಾಶ

ಬೆಂಗಳೂರು: ರಿಷಬ್‌ ಶೆಟ್ಟಿ ಅವರ ʼಕಾಂತಾರ ಪ್ರೀಕ್ವೆಲ್‌ʼ ಸಿನಿಮಾದ ಮುಹೂರ್ತ ಹಾಗೂ ಫಸ್ಟ್‌ ಲುಕ್‌ ಇತ್ತೀಚೆಗೆ ರಿಲೀಸ್‌ ಆಗಿದೆ.

ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ʼಕಾಂತಾರʼ ಕನ್ನಡದಲ್ಲಿ ಹಿಟ್‌ ಆಗಿ, ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್‌ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು.

ಇದೇ ಉತ್ಸಾಹದಲ್ಲಿ ಚಿತ್ರತಂಡ ಸಿನಿಮಾದ ಪ್ರೀಕ್ವೆಲ್‌ ಅಂದರೆ ಮೊದಲ ಭಾಗವನ್ನು ತರುವುದಾಗಿ ರಿಷಬ್‌ ಶೆಟ್ಟಿ ಹೇಳಿದ್ದರು. ಅದರಂತೆ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ನ.27 ರಂದು ನೆರವೇರಿತ್ತು. ಇದರೊಂದಿಗೆ ಸಿನಿಮಾದ ಫಸ್ಟ್‌ ಲುಕ್‌ ಕೂಡ ರಿಲೀಸ್‌ ಆಗಿತ್ತು.

 “ಸದ್ಯಕ್ಕೆ ನಾನೇ ಹೀರೋ, ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ಇರಲಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ  ನಡೆಯುತ್ತಿದೆ. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ” ಎಂದು ರಿಷಬ್‌ ಶೆಟ್ಟಿ ಹೇಳಿದ್ದರು.

ಸಿನಿಮಾದಲ್ಲಿ ನಟಿಸಲು 30 ರಿಂದ 60 ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. ಇನ್ನು 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ರಿಷಬ್‌ ಶೆಟ್ಟಿ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ನೋಂದಣಿಗಾಗಿ Kantara.film ಲಿಂಕ್‌ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ರೀಲ್ಸ್‌ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು  ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಡಿ.14 ರವರೆಗೆ ಲಿಂಕ್ ಚಾಲ್ತಿಯಲ್ಲಿರುತ್ತದೆ.

ʼಕಾಂತಾರʼ ಪ್ರೀಕ್ವೆಲ್‌ ನಲ್ಲಿ ಪಂಜುರ್ಲಿ ದೈವದ ಮೂಲ ಹಾಗೂ ಹುಟ್ಟಿನ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301-400 ಕಾಲದ ಕಥೆ ಇರಲಿದೆ ಎನ್ನಲಾಗಿದೆ.

ʼಕಾಂತಾರʼ ಪ್ರೀಕ್ವೆಲ್ ಈ ಬಾರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular