Sunday, January 11, 2026
Google search engine

HomeUncategorizedಕಚೇರಿ ಆರಣದಲ್ಲಿಯೇ ಮದ್ಯ ಸೇವನೆ ಮಾಡಿದ ಹೆಸ್ಕಾಂ ಜೆಇ

ಕಚೇರಿ ಆರಣದಲ್ಲಿಯೇ ಮದ್ಯ ಸೇವನೆ ಮಾಡಿದ ಹೆಸ್ಕಾಂ ಜೆಇ

ವಿಜಯಪುರ: ಜಿಲ್ಲೆಯ ಹೆಸ್ಕಾಂ ಜೆಇಯೊಬ್ಬರು ಕಚೇರಿ ಆರಣದಲ್ಲಿಯೇ ಮದ್ಯ ಸೇವನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕಛೇರಿ ಆವರಣದಲ್ಲೇ ಹೆಸ್ಕಾಂ ಜೆಇ ಗೊಲ್ಲಾಳಪ್ಪ ಪಾಟೀಲ ಮದ್ಯ ಸೇವಿಸುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿವೆ.

ಗೊಲ್ಲಾಳಪ್ಪ ಮದ್ಯ ಸೇವನೆ ಮಾಡುತ್ತ ಕಛೇರಿ ಆವರಣದಲ್ಲಿ ಕುಳಿತಿರುವ ಸಂದರ್ಭದಲ್ಲಿ ಸಾರ್ವಜನಿಕರು ನೋಡಿ, ಆಕ್ಷೇಪಿಸಿದ್ದಾರೆ.

ಆದರೆ ತಾನು ಮದ್ಯ ಸೇವಿಸಿಲ್ಲ, ಏನೂ ತಪ್ಪು ಮಾಡಿಲ್ಲ ಎಂದು ಗೊಲ್ಲಾಳಪ್ಪ ವಾದಿಸಿದ್ದು, ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಡಿದ್ದಾರೆ. ಅಲ್ಲದೇ ಕಚೇರಿಯಲ್ಲೇ ಮದ್ಯ ಸೇವನೆ ಮಾಡುತ್ತ ಕುಳಿತಿರುವ ಜೆಇ ಗೊಲ್ಲಾಳಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular