ಪಿರಿಯಾಪಟ್ಟಣ: ನೆಲ ಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಜಿ ಶಿವಶಂಕರ್ ಉಪಾಧ್ಯಕ್ಷರಾಗಿ ಕೆ.ಎಸ್ ಲೋಕಪಾಲಯ್ಯ ಅವಿರೋಧ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಶಿವಸ್ವಾಮಿ ಹಾಗೂ ಕುಮಾರಸ್ವಾಮಿ ಅವರ ಅವಧಿ ಮುಗಿದು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಪಟ್ಟಣದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಜಿ ಶಿವಶಂಕರ್ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್ ಲೋಕಪಾಲಯ್ಯ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಚುನಾವಣಾಧಿಕಾರಿ ಸಿಡಿಓ ಹಿತೇಂದ್ರ ಅವಿರೋಧ ಆಯ್ಕೆ ಘೋಷಿಸಿದರು ಬಳಿಕ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು ಹಾಗೂ ಸದಸ್ಯರು ಅಭಿನಂದಿಸಿ ಶುಭ ಕೋರಿದರು.

ನೂತನ ಅಧ್ಯಕ್ಷ ಹೆಚ್.ಜಿ ಶಿವಶಂಕರ್ ಅವರು ಮಾತನಾಡಿ ಗ್ರಾಮೀಣ ಭಾಗದ ರೈತರ ಅಭಿವೃದ್ಧಿಗಾಗಿ ಮೈರಾಡ ಸಂಸ್ಥೆಯ ಸಹಕಾರದೊಂದಿಗೆ ತಾಲೂಕಿನಲ್ಲಿ ಹುಟ್ಟಿಕೊಂಡ ನೆಲ ಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘ ತಾಲೂಕಿನಾದ್ಯಂತ ಸದಸ್ಯರನ್ನು ಹೊಂದಿದ್ದು ಕೆರೆಕಟ್ಟೆಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ನನಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಎಂ.ಎಲ್ ನವೀನ್, ಡಿ.ಟಿ ಸತೀಶ್, ಕೆ.ಬಿ ಶಿವಕುಮಾರಸ್ವಾಮಿ, ಎ.ಕುಮಾರ್, ಕೆ.ಕೃಷ್ಣೇಗೌಡ, ಎ.ಸಿ ಧರಣೆಶಪ್ಪ, ಕೆ.ವಿ ಆನಂದ್, ವೆಂಕಟೇಶ್, ಎ.ಟಿ ಮಂಜುನಾಯಕ, ಇಂದಿರಾ, ಎಸ್.ಕೆ ಜ್ಯೋತಿ, ಹೆಚ್.ಎ ವೆಂಕಟೇಶ್, ಸಿಈಓ ಎನ್.ಹರೀಶ್ ಮುಖಂಡರಾದ ಪರಮೇಶ್, ಕೃಷ್ಣೇಗೌಡ, ನಾಗರಾಜ್ ಮತ್ತು ಸದಸ್ಯರು ಇದ್ದರು.