ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ಸೈಬರ್ ವಂಚಕರು ಉಪ ಆಯುಕ್ತರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿದೆ.ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಡಿಪಿಯನ್ನು ಬಳಸಿಕೊಂಡು, ತುರ್ತಾಗಿ 50 ಸಾವಿರ ರೂ.ಗಳನ್ನು ನಿರ್ದಿಷ್ಟ ಖಾತೆಗೆ ಹಾಕುವಂತೆ ಸಂದೇಶ ರವಾನಿಸಲಾಗಿದೆ. ಹಣ ವರ್ಗಾವಣೆ ಮಾಡಿದ ತಕ್ಷಣ ಸ್ಟ್ರೀನ್‌ಶಾಟ್ ಕಳುಹಿಸಲು ಸೂಚನೆ ನೀಡಲಾಗಿತ್ತು. ಅನುಮಾನಗೊಂಡ ಉಪ ಆಯುಕ್ತ ಉದಯ ಕುಮಾರ್ ತಳವಾರ ಅವರು ಸ್ವತಃ ಆಯುಕ್ತರಿಗೆ ಕರೆ ಮಾಡಿ ವಿಚಾರಿಸಿದಾಗ ಇದು ವಂಚನೆ ಎಂದು ತಿಳಿದುಬಂದಿದೆ. ಈ ಸಂಬಂಧ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



