Monday, April 21, 2025
Google search engine

Homeಸಿನಿಮಾಮಾ.೧೫ರಂದು ಹೈಡ್ ಅಂಡ್ ಸೀಕ್ ಬಿಡುಗಡೆ

ಮಾ.೧೫ರಂದು ಹೈಡ್ ಅಂಡ್ ಸೀಕ್ ಬಿಡುಗಡೆ

ಮೈಸೂರು: ಧನ್ಯ ರಾಮ್‌ಕುಮಾರ್ ಹಾಗೂ ಅನೂಪ್ ರೇವಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹೈಡ್ ಅಂಡ್ ಸೀಕ್ ಶೀರ್ಷಿಕೆಯ ಚಲನಚಿತ್ರ ಮಾ.೧೫ ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಪುನೀತ್ ನಾಗರಾಜು ತಿಳಿಸಿದರು.

ಇದು ಸಸ್ಪೆನ್ಸ್, ಥ್ರಿಲ್ಲರ್ ಆಧಾರಿತ ಒಂದು ಅಪಹರಣದ ಸುತ್ತಲಿನ ಕಥೆಯ ಚಲನಚಿತ್ರವಾಗಿದೆ. ಐದು ಪ್ರಮುಖ ಪಾತ್ರಗಳ ಸುತ್ತಮುತ್ತ ಚಲನಚಿತ್ರ ಸಾಗುತ್ತದೆ. ಮಾಗಡಿ, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ. ಎರಡು ಉತ್ತಮ ಹಾಡುಗಳಿದ್ದು, ಸಂಪೂರ್ಣ ಕಾಲ್ಪನಿಕ ಚಿತ್ರವಾಗಿದೆ. ಹೀಗಾಗಿ ಸಿನಿಮಾ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular