Monday, April 21, 2025
Google search engine

Homeರಾಜಕೀಯಕೆ.ಎಸ್.ಈಶ್ಚರಪ್ಪನವರ ಬಳಿ ಹೈಕಮಾಂಡ್ ಮಾತಾನಾಡಿ ಗೊಂದಲ ಇತ್ಯರ್ಥಪಡಿಸುತ್ತಾರೆ: ಸಿ.ಟಿ.ರವಿ

ಕೆ.ಎಸ್.ಈಶ್ಚರಪ್ಪನವರ ಬಳಿ ಹೈಕಮಾಂಡ್ ಮಾತಾನಾಡಿ ಗೊಂದಲ ಇತ್ಯರ್ಥಪಡಿಸುತ್ತಾರೆ: ಸಿ.ಟಿ.ರವಿ

ಚಿಕ್ಕಮಗಳೂರು: ಕೆ.ಎಸ್.ಈಶ್ಚರಪ್ಪನವರ ಬಳಿ ಪಕ್ಷದ ಹಿರಿಯರು ಹಾಗೂ ಹೈಕಮಾಂಡ್ ಮಾತಾನಾಡಿ ಗೊಂದಲ ಇತ್ಯರ್ಥಪಡಿಸಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ನಿರ್ಧಾರದಿಂದ ಪಕ್ಷಕ್ಕೆ ಮಾರಕವಾಗಬಾರದು, ನರೇಂದ್ರ ಮೋದಿಯವರು ಮತ್ತೇ ಪ್ರಧಾನಮಂತ್ರಿ ಯಾಗಲು ಒಂದೊಂದು ಸೀಟು ಅಮೂಲ್ಯವಾದದ್ದು, ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು ಎಂದರು.

ನಿಮ್ಮ ನಿರ್ಣಯ ಪಕ್ಷಕ್ಕೆ ಮತ್ತು ದೇಶಕ್ಕೆ ಹಿತವಾಗಿರಬೇಕು. ಅವರ ನಿರ್ಧಾರವನ್ನು ಮರು ಪರಿಶೀಲನೆ ಮಾಡಿಕೊಳ್ಳಬೇಕು. ನಮ್ಮ ಪಕ್ಷದ ವರಿಷ್ಟರು ಅವರ ಮನವೊಲಿಸುತ್ತಾರೆಂಬ‌ ವಿಶ್ವಾಸವಿದೆ ಎಂದು ತಿಳಿಸಿದರು.

ಅಭ್ಯರ್ಥಿ ಘೋಷಣೆಯಾಗಿದೆ. ನಾನೇ ಅವರು, ಅವರೇ ನಾನು ಎಂದು ಕೆಲಸ ಮಾಡುತ್ತೇನೆ. ಪಕ್ಷವನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದರು.

ಯಾರು ಸ್ವಾರ್ಥ ರಾಜಕಾರಣ ಮಾಡುತ್ತಾರೆ ಅವರು ಪಕ್ಷವನ್ನು ಬಲಿ ಕೊಡುವ ಕೆಲಸ ಮಾಡುತ್ತಾರೆ. ನಾನು ಪಕ್ಷದ ಹಿತಕ್ಕಾಗಿ ರಾಜಕಾರಣ ಮಾಡಿದ್ದೇನೆ. ನಮಗೆ ಅವಕಾಶ ಸಿಕ್ಕಾಗ ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದೇನೆ ಎಂದರು.

ನಾನು ಸಿದ್ದಾಂತ ಬದ್ದ ರಾಜಕಾರಣ ಮಾಡಿದ್ದೇನೆ. ಕೆಲವರಿಗೆ ಅದು ದೌರ್ಬಲ್ಯ ಅನಿಸಿರಬಹುದು, ನಾನು ಏನೇ ಮಾಡಿದರೂ ಪಕ್ಷ ಬಿಡಲ್ಲ. ಕೆಲವು ಸಲ ಅಗ್ನಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಅಗ್ನಿ ಪರೀಕ್ಷೆ ಎದುರಿಸಿದಾಗ ನಮ್ಮ ಪಕ್ಷ ನಿಷ್ಟೆ ಸಾಭೀತಾಗುತ್ತದೆ.

ಯಾರಿಗೆ ಟಿಕೆಟ್ ನೀಡಿದರೂ ಮೋದಿ ಮುಖ ನೋಡಿ ಕೆಲಸ ಮಾಡುತ್ತೇವೆ. ನಾನು ಎಂದು ಪಕ್ಷ ದ್ರೋಹ ಮಾಡಿಲ್ಲ. ಮೋದಿಯೇ ನಮ್ಮ ಅಭ್ಯರ್ಥಿ ಎಂದು ಕೆಲಸ ಮಾಡುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular