ಬೆಂಗಳೂರು: ಮುಡಾ ಹಗರಣ ಸಂಬಂಧ ಇಡಿ ಕೂಡ ಎಂಟ್ರಿಯಾಗಿತ್ತು. ಇದೀಗ ಇಡಿಯಿಂದ ಮುಡಾ ಪ್ರಕರಣದ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಮುಡಾ ಹಗರಣದ ಇತರೆ ಆರೋಪಿಗಳಿಗೂ ನಡುಕ ಶುರುವಾದಂತೆ ಆಗಿದೆ.
ಈ ಸಂಬಂಧ ಹೈಕೋರ್ಟ್ ನ್ಯಾಯಪೀಠದಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಸಲಾಯಿತು. ಡಿ.ಬಿ ನಟೇಶ್ ಅವರ ಹೇಳಿಕೆಯನ್ನು ಆಧರಿಸಿ ಹೈಕೋರ್ಟ್ ನ್ಯಾಯಪೀಠವು ಮುಡಾ ಹಗರಣ ಸಂಬಂಧ ಇಡಿ ತನಿಖೆಗೆ ಅನುಮತಿ ನೀಡಿದೆ.
ಮುಡಾ ಪ್ರಕರಣದಲ್ಲಿ ಇಡಿ ತನಿಖೆಗೆ ಹೈಕೋರ್ಟ್ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ವಿಭಾಗೀಯ ಪೀಠವು ಅನುಮತಿ ನೀಡಿದೆ. ಹೀಗಾಗಿ ಮುಡಾ ಪ್ರಕರಣ ಈಗ ಮತ್ತೊಂದು ತಿರುವು ಪಡೆದಂತೆ ಆಗಿದೆ.
ಇನ್ನೂ ಡಾ.ಡಿಬಿ ನಟೇಶ್ ವಿರುದ್ಧದ ಸಮನ್ಸ್ ರದ್ದು ಆದೇಶಕ್ಕೆ ತಡೆ ನೀಡಿಲ್ಲ. ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಕಾರ ವ್ಯಕ್ತಪಡಿಸಿದೆ. ಆದರೇ ಡಿ.ಬಿ ನಟೇಶ್ ಹೇಳಿಕೆ ಆಧರಿಸಿ ಇಡಿ ತನಿಖೆ ಮುದುವರೆಸಬಹುದು ಎಂಬುದಾಗಿ ಸಿಜೆ ಅಂಜಾರಿಯಾ, ನ್ಯಾಯಮೂರ್ತಿ ಅರವಿಂದ್ ಅವರಿದ್ದಂತ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ನಿಗದಿಪಡಿಸಿದೆ.