Tuesday, January 20, 2026
Google search engine

Homeಅಪರಾಧಕಾನೂನುಪವಿತ್ರಾ ಗೌಡಗೆ ಹೈಕೋರ್ಟ್ ಬಿಗ್ ಶಾಕ್: ಮನೆ ಊಟಕ್ಕೆ ಬ್ರೇಕ್

ಪವಿತ್ರಾ ಗೌಡಗೆ ಹೈಕೋರ್ಟ್ ಬಿಗ್ ಶಾಕ್: ಮನೆ ಊಟಕ್ಕೆ ಬ್ರೇಕ್

ಬೆಂಗಳೂರು : ಕಳೆದೊಂದು ತಿಂಗಳಿನಿಂದ ಮನೆ ಊಟಕ್ಕಾಗಿ ಹಂಬಲಿಸುತ್ತಿರುವ ಪವಿತ್ರ ಗೌಡಗೆ ಹೈಕೋರ್ಟ್‌ ಬಿಗ್ ಶಾಕ್ ನೀಡಿದೆ. ಕಾನೂನಿನಲ್ಲಿ ಮನೆ ಊಟಕ್ಕೆ ಅವಕಾಶ ಇಲ್ಲ. ಊಟ ನೀಡುವುದು ಸೂಕ್ತ ಅಲ್ಲ ಎಂದು ಅಭಿಪ್ರಾಯಪಟ್ಟು ಸೆಷನ್ಸ್ ಕೋರ್ಟ್ ಆದೇಶಕ್ಕೆ ತಡೆ ನೀಡಿದೆ.

ಕಳೆದ ನಾಲ್ಕು ತಿಂಗಳಿನಿಂದ ಜೈಲಿನ ಊಟ ತಿನ್ನುತ್ತಿದ್ದೇನೆ. ಜೈಲೂಟದಿಂದ ದಿನ ದಿನ ಆರೋಗ್ಯದಲ್ಲಿ ಸಮಸ್ಯೆ ಆಗುತ್ತಿದ್ದು ಮನೆಯೂಟ ನೀಡುವಂತೆ ಪವಿತ್ರಾ ಗೌಡ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಊಟ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಮನೆ ಊಟ ನೀಡುವುದಕ್ಕೆ ಕಾರಾಗೃಹ ಇಲಾಖೆ ಬಿಲ್ ಕುಲ್ ಒಪ್ಪಿಗೆ ನೀಡಿರಲಿಲ್ಲ. ಒಬ್ಬರಿಗೆ ಊಟ ನೀಡಿದರೆ ಎಲ್ಲರೂ ಇದೇ ಆದೇಶ ಉಲ್ಲೇಖಿಸಿ ಊಟ ಪಡೆಯುತ್ತಾರೆ. ಆಗ ಊಟವನ್ನು ನೀಡುವುದೇ ದೊಡ್ಡ ಕೆಲಸ ಆಗಿ ಹೋಗುತ್ತದೆ. ಆ ರೀತಿ ಊಟ ನೀಡಿದರೆ ಜೈಲಿನ ಊಟ ಕಳಪೆ ಎಂದು ನಾವೇ ಒಪ್ಪಿಕೊಂಡಂತೆ ಆಗುತ್ತದೆ. ಹಾಗಾಗಿ ಊಟ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಕೋರ್ಟ್‌ ವಾರಕ್ಕೆ ಒಮ್ಮೆ ಊಟ ನೀಡಿ ಎಂದಿತ್ತು. ಅದಕ್ಕೂ ಒಪ್ಪದ ಕಾರಾಗೃಹ ಇಲಾಖೆ ಹೈಕೋರ್ಟ್ ಮೊರೆ ಹೋಗಿತ್ತು.

ಹೈಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದ ಎಸ್‌ಪಿಪಿ ಜಗದೀಶ್ ಜೈಲಿನ ಊಟ ಪ್ರಮಾಣಿಕರಿಸಲಾಗಿದ್ದು ಕಳಪೆ‌ ಆಹಾರ ಅಲ್ಲ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಈಗಾಗಲೇ 4 ಸ್ಟಾರ್ ನೀಡಿದೆ.ಇದೂವರೆಗೂ ಯಾವೊಬ್ಬ ಆರೋಪಿಯೂ ಊಟದ ಬಗ್ಗೆ ದೂರು ನೀಡಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

ವಾದ ಆಲಿಸಿದ ನ್ಯಾ. ನಾಗಪ್ರಸನ್ನ ಅವರ ಪೀಠ ಕಾನೂನು ಎಲ್ಲರಿಗೂ ಒಂದೇ. ಯಾವುದೇ ವಿಶೇಷ ಸವಲತ್ತನ್ನು ನೀಡುವ ಹಾಗೇ ಇಲ್ಲ. ಈಗಾಗಲೇ ಸುಪ್ರೀಂ ಕೋರ್ಟ್ ವಿಶೇಷ ಸವಲತ್ತು ನೀಡಿದರೆ ಅಧಿಕಾರಿಗಳ ತಲೆದಂಡ ಮಾಡಲಾಗುವುದು ಎಂದು ಹೇಳಿದೆ ಎಂದು ಉಲ್ಲೇಖಿಸಿ ಸೆಷನ್ಸ್ ಕೋರ್ಟ್ ನೀಡಿದ ಆದೇಶಕ್ಕೆ ಬ್ರೇಕ್ ಹಾಕಿದೆ. ಅಲ್ಲದೇ ಯಾವೊಬ್ಬ ಆರೋಪಿಗೂ ಮನೆ ಊಟ ನೀಡದಂತೆ ಸೂಚಿಸಿದೆ.

ಒಟ್ಟಿನಲ್ಲಿ ಕಳೆದ 4 ತಿಂಗಳಿಂದ ಹಾಸಿಗೆ, ದಿಂಬು ಮನೆ ಊಟ, ಬ್ಲಾಂಕೇಟ್ ಅಂದುಕೊಂಡೇ ಕಾಲ ದೂಡಿದ್ದ ಪವಿತ್ರಗೌಡ ಅಂಡ್ ಗ್ಯಾಂಗ್‌ ಈಗ ಮತ್ತೊಂದು ಶಾಕ್ ಎದುರಾಗಿದೆ.

RELATED ARTICLES
- Advertisment -
Google search engine

Most Popular