Monday, July 7, 2025
Google search engine

Homeಅಪರಾಧಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಬಯಲು: 6 ಪುರುಷರು, 2 ಯುವತಿಯರು ವಶಕ್ಕೆ, ಪ್ರಮುಖ ಆರೋಪಿ ಬಂಧನ

ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಬಯಲು: 6 ಪುರುಷರು, 2 ಯುವತಿಯರು ವಶಕ್ಕೆ, ಪ್ರಮುಖ ಆರೋಪಿ ಬಂಧನ

ಮೈಸೂರು:  ವೇಶ್ಯಾವಾಟಿಕೆ ನಡೆಯುತಿದ್ದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ 6 ಜನ ಪುರುಷರು, ಇಬ್ಬರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರು ತಾಲೂಕಿನ  ದಾಸನಕೊಪ್ಪಲು ಗ್ರಾಮದ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ  ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ 6 ಜನ ಪುರುಷರು 2 ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಮುಖ್ಯ ಆರೋಪಿ ಮಂಜು ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಹೆಣ್ಣು ಮಕ್ಕಳನ್ನು ಕರೆದಂದು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆರೋಪಿ ಮಂಜು 30 ದಿನಗಳಿಗೆ ಒಮ್ಮೆ ಮನೆ ಬದಲಾಯಿಸಿ ವೇಶ್ಯಾವಾಟಿಗೆ ದಂಧೆ ನಡೆಸುತ್ತಿದ್ದ.  ಬೇರೆ ಕಡೆಗಳಿಂದ ಯುವತಿಯರಿಗೆ ಹಣ ಕೊಟ್ಟು ಕರೆಸಿಕೊಂಡು ವೇಶ್ಯಾವಾಟಿಕೆನಡೆಸುತ್ತಿದ್ದನು ಎನ್ನಲಾಗಿದೆ.

ಪೊಲೀಸರು ಖಚಿತ ಮಾಹಿತಿ ತಿಳಿದು ದಾಳಿ ಮಾಡಿದ ವೇಳೆ ರೆಡ್ ಹ್ಯಾಂಡ್ ಆಗಿ ಇಬ್ಬರು ಯುವತಿಯರು 6 ಪುರುಷರು ಸಿಕ್ಕಿಬಿದ್ದಿದ್ದಾರೆ.

RELATED ARTICLES
- Advertisment -
Google search engine

Most Popular