ತಾಂಡವಪುರ: ಗ್ರಾಮದ ಅಭಿವೃದ್ಧಿ ಹಾಗೂ ಒಳ್ಳೆಯದನ್ನು ಬಯಸಿ ರಾಜ್ಯದ ಸುಬ್ಬೀಕ್ಷೆಗಾಗಿ ಪ್ರತಿವರ್ಷದಂತೆ ಈ ವರ್ಷವೂ ಸಹ ಗ್ರಾಮದ ಕಂಸಾಳ ಕಲಾ ಬಳಗದ ಮಾದಪ್ಪ ರವರ ನೇತೃತ್ವದಲ್ಲಿ ಕಂಸಾಳ ಕಲಾವಿದರು ಹಾಗೂ ಸುಮಾರು ೧೨೦ಕ್ಕೂ ಹೆಚ್ಚು ಗ್ರಾಮಸ್ಥರು ಮೈಸೂರು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ರಾಯನ ಹುಂಡಿ ಗ್ರಾಮದಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳಿದರು.
ಗ್ರಾಮದ ಗ್ರಾಮ ದೇವತೆ ದೇವಾಲಯಗಳಿಗ ಪೂಜಿಸಲಿ ಬಳಿಕ ಮಾದಪ್ಪನವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ನಮ್ಮ ಗ್ರಾಮಕ್ಕೆ ಒಳ್ಳೆಯದಾಗಲಿ ರಾಜ್ಯವು ಸುಭಿಕ್ಷೆ ಆಗಿರಲಿ ಎಂದು ನಮ್ಮ ಗ್ರಾಮದಿಂದ ಕಳೆದ ೨೨ ವರ್ಷಗಳಿಂದ ಸಹ ನಾವು ಮಾದಪ್ಪನ ಸನ್ನಿಧಿಗೆ ಪಾದಯಾತ್ರೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬೇಡಿಕೊಳ್ಳುತ್ತೇವೆ ನಮ್ಮ ಪಾದಯಾತ್ರೆಯು ಸಿದ್ದರಾಮಯ್ಯನ ಹುಂಡಿ ನರಸೀಪುರ ಮಾರ್ಗವಾಗಿ ಪಾದಯಾತ್ರೆಯಲ್ಲಿ ಸಾಗಿ ಮಾದಪ್ಪನ ಬೆಟ್ಟವನ್ನು ತಲುಪುತ್ತೇವೆ ಎಂದು ಕಂಸಾಳ ಕಲಾ ಬಳಗದ ಮಾದಪ್ಪ ರವರು ತಿಳಿಸಿದರು.
ಈ ಪಾದಯಾತ್ರೆಯಲ್ಲಿ ತಿರುಳುತ್ತಿರುವ ಗ್ರಾಮಸ್ಥರು ಹಾಗೂ ಕಂಸಾಳ ಕಲಾ ಬಳಗದವರಿಗೆ ಶುಭವಾಗಲಿ ಮಾದಪ್ಪನ ಸನ್ನಿಧಿಗೆ ಯಾವುದೇ ತೊಂದರೆ ಇಲ್ಲದೆ ತಲುಪಿ ದೇವರ ಕೃಪೆಗೆ ಪಾತ್ರರಾಗಲಿ ಎಂದು ಗ್ರಾಮದ ಮಾದೇಶ್ವರನ ದೇವಾಲಯದಲ್ಲಿ ಮಹಿಳಾ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಮುಖಂಡರುಗಳು ಹಾಜರಿದ್ದರು.