Friday, April 11, 2025
Google search engine

Homeರಾಜ್ಯಗುಡ್ಡ ಕುಸಿತ: ರಕ್ಷಣಾ ತಂಡಗಳಿಂದ ತಾರತಮ್ಯ ನಡೆಯುತ್ತಿಲ್ಲ: ಶಾಸಕ ಅಶ್ರಫ್

ಗುಡ್ಡ ಕುಸಿತ: ರಕ್ಷಣಾ ತಂಡಗಳಿಂದ ತಾರತಮ್ಯ ನಡೆಯುತ್ತಿಲ್ಲ: ಶಾಸಕ ಅಶ್ರಫ್

ಕಾರವಾರ: ಅಂಕೋಲ ಬಳಿಯ ಶಿರೂರು ಗುಡ್ಡ ಕುಸಿತ ಪ್ರಕರಣಲ್ಲಿ ಇದುವರೆಗೆ ೮ ಮೃತದೇಹಗಳು ದೇಹಗಳು ಪತ್ತೆಯಾಗಿವೆ ಮತ್ತು ಇನ್ನೂ ಮೂವರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ.

ಕೇರಳದ ಲಾರಿ ಚಾಲಕ ಅರ್ಜುನ್ ಇನ್ನು ಪತ್ತೆಯಾಗಿಲ್ಲ. ಸೇನೆಯ ತುಕಡಿ, ಎಸ್ ಡಿ ಅರ್ ಎಫ್, ಎನ್ ಡಿಆರ್ ಎಫ್, ಅಗ್ನಿಶಾಮಕ ದಳ ಮೊದಲಾದ ತಂಡಗಳು ಕಣ್ಮರೆಯಾಗಿರುವವರೆಲ್ಲರ ಹುಡುಕಾಟವನ್ನು ಕಳೆದ ೮ ದಿನಗಳಿಂದ ನಡೆಸಿದ್ದರೂ, ಅರ್ಜುನ್ ಕುಟುಂಬದವರು ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆ ಬಗ್ಗೆ ಮಾತನಾಡಿದ ಕೇರಳ ಮಂಜೇಶ್ವರ ಕ್ಷೇತ್ರದ ಶಾಸಕ ಎಕೆಎಮ್ ಅಶ್ರಫ್, ಕಾಣೆಯಾಗಿರುವ ಅರ್ಜುನ್ ಸಹೋದರಿ ಕಾರ್ಯಾಚರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ, ಅದರೆ ತಾನು ಕಳೆದ ೫ ದಿನಗಳಿಂದ ಇಲ್ಲೇ ಇದ್ದು ಕಾರ್ಯಾಚರಣೆ ವೀಕ್ಷಿಸುತ್ತಿದ್ದೇನೆ, ಎಲ್ಲೂ ತಾರತಮ್ಯವಾಗುತ್ತಿಲ್ಲ, ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬಂದಾಗ ಅವರನ್ನೂ ಭೇಟಿಯಾಗಿದ್ದೇನೆ, ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ನೇತೃತ್ವದಲ್ಲಿ ಎಲ್ಲ ಕೆಲಸಗಳು ಲೋಪವಿಲ್ಲದೆ ಜರುಗುತ್ತಿವೆ ಎಂದು ಅಶ್ರಫ್ ಹೇಳಿದರು.

RELATED ARTICLES
- Advertisment -
Google search engine

Most Popular