‘ಸೀತಾ ರಾಮ’ ಧಾರಾವಾಹಿ ಮರಾಠಿಯ ‘ಮಜಿ ತುಜಿ ರೆಶಿಮಗತ್’ ಧಾರಾವಾಹಿಯ ಕಥೆಯನ್ನು ಆಧರಿಸಿದೆ. ಜೀ ಮರಾಠಿಯಲ್ಲಿ 2021 ಆಗಸ್ಟ್ ತಿಂಗಳಿಂದ 2023 ಜನವರಿವರೆಗೆ ಈ ಧಾರಾವಾಹಿ ಪ್ರಸಾರ ಕಂಡಿತ್ತು. ಈ ಧಾರಾವಾಹಿ ಒಟ್ಟೂ 458 ಎಪಿಸೋಡ್ಗಳನ್ನು ಹೊಂದಿತ್ತು. ಪ್ರಾರ್ಥನಾ ಬೆಹೆರೆ ಹಾಗೂ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯನ್ನು ಕನ್ನಡಕ್ಕೆ ‘ಸೀತಾ ರಾಮ’ ಹೆಸರಲ್ಲಿ ರಿಮೇಕ್ ಮಾಡಲಾಯಿತು. ಈಗ ಧಾರಾವಾಹಿ ಹಿಂದಿಗೂ ರಿಮೇಕ್ ಆಗುತ್ತಿದೆ.
ಜೀ ಟಿವಿಯಲ್ಲಿ ‘ಮೇ ಹೂ ಸಾತ್ ತೆರೆ’ ಧಾರಾವಾಹಿ ಪ್ರಸಾರ ಕಾಣಲಿದೆ. ಸದ್ಯ ಪ್ರೋಮೋಗಳ ಮೂಲಕ ಧಾರಾವಾಹಿ ಗಮನ ಸೆಳೆಯುತ್ತಿದೆ. ಕನ್ನಡದಲ್ಲಿ ಗಗನ್ ಚಿನ್ನಪ್ಪ ಮಾಡಿರೋ ಪಾತ್ರವನ್ನು ಹಿಂದಿಯಲ್ಲಿ ಕರಣ್ ವೋಹ್ರಾ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರ ಪಾತ್ರವನ್ನು ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ. ಉಲ್ಕಾ ಗುಪ್ತಾ ಅವರು ‘ಜಾನ್ಸಿ ಕಿ ರಾಣಿ’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ.
ಕಥೆಯಲ್ಲಿ ಕೊಂಚ ಬದಲಾವಣೆ
ಕನ್ನಡದಲ್ಲಿ ಕಥಾ ನಾಯಕಿ ಮಧ್ಯಮ ವರ್ಗದ ಹುಡುಗಿ. ಹಿಂದಿಯಲ್ಲಿ ಕಥಾ ನಾಯಕಿ ಸಿಂಗರ್ ಆಗಬೇಕು ಎಂದು ಕನಸು ಕಾಣುವ ಸಿಂಗಲ್ ಪೇರೇಂಟ್ ಆಗಿ ತೋರಿಸಲಾಗಿದೆ. ಕನ್ನಡದಲ್ಲಿ ಕಥಾ ನಾಯಕ ಉದ್ಯಮಿ. ಹಿಂದಿಯಲ್ಲಿ ಕರಣ್ ಅವರು ಉದ್ಯಮಿಯ ಪಾತ್ರವನ್ನೇ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಥಾ ನಾಯಕಿಗೆ ಮಗಳಿದ್ದಾಳೆ. ಹಿಂದಿಯಲ್ಲಿ ಕಥಾ ನಾಯಕಿಗೆ ಮಗ ಇರುವುದಾಗಿ ತೋರಿಸಲಾಗಿದೆ. ‘ಫುಲ್ ಹೌಸ್ ಮೀಡಿಯಾ’ ‘ಮೇ ಹೂ ಸಾತ್ ತೇರೆ’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಏಪ್ರಿಲ್ನಿಂದ ಈ ಧಾರಾವಾಹಿ ಪ್ರಸಾರ ಆಗೋ ಸಾಧ್ಯತೆ ಇದೆ.