ಮಂಗಳೂರು (ದಕ್ಷಿಣ ಕನ್ನಡ): ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮ್ ಬಾಂಧವರಿಗೆ ಹಿಂದೂ ಬಾಂಧವ್ರು ಸಿಹಿ ಹಂಚುವ ಮೂಲಕ ಸೌಹಾರ್ದತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಕೊಡಾಜೆ, ಅನಂತಾಡಿಯಲ್ಲಿ ನಡೆದಿದೆ.

ಸೋಮವಾರ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಿಸಿದ್ದು ವಿವಿಧ ಕಾರ್ಯಕ್ರಮ, ಜಾಥಾ ನಡೆಯ್ತು. ಬಿಸಿರೋಡ್ ನಲ್ಲಿ ಸಂಘಪರಿವಾರದಿಂದ ಹೈಡ್ರಾಮಾ ನಡೆದ ಬೆನ್ನಲ್ಲೇ ಹಿಂದೂ ಸಮುದಾಯದ ಸೌಹಾರ್ದ ಬಂಧುಗಳು ಈದ್ ಮಿಲಾದ್ ಮೆರವಣಿಗೆಯಲ್ಲಿ ಸಿಹಿ ಹಂಚಿ ಮನುಷ್ಯ ಧರ್ಮವನ್ನು ಎತ್ತಿಹಿಡಿದ್ರು.