ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ :ಕೆ.ಆರ್.ನಗರ ತಾಲೂಕಿನ ಬಾಲೂರು ಒಂಟಿಮನೆ ಗ್ರಾಮದ ಹಿಂದೂ ಯುವಕ ಎ.ಕೆ.ಪುನೀತ್‌ನ ಸಾವು ಆತ್ಮಹತ್ಯೆಯಲ್ಲ ಅದು ಕೊಲೆ ಇದರ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿ ಈ ಬಗ್ಗೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಭಜರಂಗದಳದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ತೋಪಮ್ಮ ದೇವಾಲಯದ ಬಳಿಯಿಂದ ಕೇಸರಿ ಧ್ವಜಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಭಜರಂಗದಳದ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಮೈಸೂರು ರಸ್ತೆ, ಗರುಢಗಂಬದ ವೃತ್ತ, ಪುರಸಭೆವೃತ್ತದ ಮೂಲಕ ತೆರಳಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಮತಾಂದರಿoದ ಇತ್ತೀಚೆಗೆ ಹುಣಸೂರು ತಾಲೂಕಿನ ದಾಸನಪುರದಲ್ಲಿ ಹಿಂದೂ ಯುವಕನ ಕೊಲೆ ಸೇರಿದಂತೆ ತಾಲೂಕಿನ ಬಾಲೂರುಒಂಟಿಮನೆ ಯುವಕ ಪುನೀತ್‌ನ ಸಾವು ಸಹ ಅನುಮಾನಾಸ್ಪದವಾಗಿದ್ದು ಈ ಕೃತ್ಯಗಳಲ್ಲಿ ಕೆಲವು ಭಯೋತ್ಪಾದಕ ಸಂಘಟನಗಳ ಕೈವಾಡವಿದೆ ಎಂದು ಆರೋಪಿಸಿದರು.
ಪುನೀತ್ ಮೇಲೆ ಐದಾರು ಅನ್ಯ ಧರ್ಮದ ಯುವಕರು ಇಟ್ಟಿಗೆ, ಬೆಲ್ಟ್ ನಿಂದ ಮನಸೊಚ್ಚಿ ತಳಿಸಿದ್ದಾರೆ , ಪುನೀತ್ ಐದಾರು ಯುವಕರ ಮೇಲೆ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು ಅವರುಗಳನ್ನು ಕರೆಸಿ ವಿಚಾರಣೆ ಮಾಡಲಿಲ್ಲ, ದೂರು ಕೊಟ್ಟಿದಕ್ಕೆ ಮತ್ತೆ ಅವನಮೇಲೆ ಇದೇ ಐದಾರು ಮಂದಿ ಯುವಕರು ಮುಳ್ಲೂರು ರಸ್ತೆಯಲ್ಲಿ ಹಲ್ಲೆ ಮಾಡಿದ್ದಾರೆ. ಪುನೀತ್ ಸಾವು ಆತ್ಮಹತ್ಯೆಯಲ್ಲ ಕೋಲೆ ತನಿಖೆಯಾಗ ಬೇಕು ತಪ್ಪಿತಸ್ಥರನ್ನು ಬಂದಿಸ ಬೇಕು ಎಂದು ಪುನೀತ್ ತಾಯಿ ಭಾರತಿ ಕಣ್ಣೀರು ಹಾಕಿ ಒತ್ತಾಯ ಮಾಡಲಾಯಿತು.
ಭಾರತ್‌ಮಾತಾಕಿ ಜೈ, ಹಿಂದೂ ನಾವೆಲ್ಲಾ ಒಂದು, ಪುನೀತ್ ಅಮರ್‌ರಹೆ ಎಂಬ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ಭಜರಂಗದಳದ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಹಿಂದೂ ಯುವಕರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಪ್ರಾಂತ ಸೇವಾಪ್ರಮುಖ್ ರಾ.ಸತೀಶ್, ವಿಭಾಗ ಅಧ್ಯಕ್ಷ ರಾಜೇಂದ್ರಬಾಬು, ಭಜರಂಗದಳದ ವಿಭಾಗ ಸಂಯೋಜಕ ಬಸವರಾಜು, ಜಿಲ್ಲಾಧ್ಯಕ್ಷ ಸೋಮಣ್ಣ, ಮಾತೃಶಕ್ತಿ ಪ್ರಮುಖ್ ಭಾರತಿ, ಜಿಲ್ಲಾ ಭಜರಂಗದಳದ ಸಂಯೋಜಕ ಚಂದ್ರಮೌಳಿ, ಸಹ ಸಂಯೋಜಕ ಮಧು, ಹೊಸೂರು ಧರ್ಮ ವಿನಯ್‌ಶೆಟ್ಟಿ, ಕೆಂಚಿಮoಜು, ಧರ್ಮ, ಅರಕೆರೆಮಧು, ಕೃಷ್ಣಯ್ಯ, ನಂಜುoಡ, ಲಾಳನಹಳ್ಳಿಮಂಜು, ಸಂತು, ಸೂರಿ, ಶಿವರಾಜು, ಪೋಟೋ ಸುನೀಲ್, ಸೇರಿದಂತೆ ನೂರಾರು ಕಾರ್ಯಕರ್ತರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಯಾವುದೆ ಅಹಿತರ ಘಟನೆ ಸಂಭವಿಸದೆ ಶಾಂತಿಯುತವಾಗಿ ಪ್ರತಿಭಟನೆ ಕಾರ್ಯಕ್ರಮ ಕೊನೆಗೊಂಡಿತು. ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.