ಮಂಗಳೂರು(ದಕ್ಷಿಣ ಕನ್ನಡ): ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಬೇಕು. ಹಿಂದು ಮಹಿಳೆಯರು ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಂಡು ಓಡಾಡಬೇಕು ಎಂದು ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಕೇರಳದ ಮಂಜೇಶ್ವರದ ವರ್ಕಾಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಟ್, “ಹಿಂದುಗಳು ತಲ್ವಾರ್ ಇಟ್ಟುಕೊಳ್ಳಬೇಕು. ಆಕ್ರಮಣ ಎಸಗಲು ಬಂದವರಿಗೆ ತಲ್ವಾರ್ ತೋರಿಸಿದರೆ ಸಾಕು, ಅವರು ಹಿಂದಕ್ಕೆ ಓಡುತ್ತಾರೆ” ಎಂದು ಹೇಳಿದ್ದಾರೆ.
“ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ವೇಳೆ, ಭಯೋತ್ಪಾದಕರಿಗೆ ಹಿಂದುಗಳು ತಲ್ವಾರ್ ತೋರಿಸಿದ್ದರೆ ಸಾಕಿತ್ತು. ಅಲ್ಲಿನ ಕತೆಯೇ ಬೇರೆ ಆಗಿರುತ್ತಿತ್ತು” ಎಂದಿದ್ದಾರೆ.
“ಮಹಿಳೆಯರು ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಂಡು ಓಡಾಡಬೇಕು. ಆರು ಇಂಚಿನ ಚೂರಿ ಇಟ್ಟುಕೊಳ್ಳಲು ಯಾವುದೇ ಪರವಾನಗಿ ಬೇಕಿಲ್ಲ. ಆಕ್ರಮಣಕ್ಕೆ ಬಂದವರಿಗೆ ಆಕ್ರಮಣ ಮಾಡಬೇಡಿ ಅಂತ ಬೇಡಿಕೊಂಡರೆ ಉಪಯೋಗವಿಲ್ಲ. ಬದಲಿಗೆ, ಚೂರಿ ತೋರಿಸಬೇಕು. ಆಗ ಹೆದರಿ ಓಡುತ್ತಾರೆ” ಎಂದಿದ್ದಾರೆ.