Friday, April 11, 2025
Google search engine

Homeರಾಜ್ಯಹಿಟ್ ಅಂಡ್ ರನ್ ಕಾನೂನು: ಜ. 17ರಿಂದ ಕರ್ನಾಟಕ ಲಾರಿ ಮಾಲೀಕರಿಂದ ಅನಿರ್ದಿಷ್ಟಾವಧಿ ಮುಷ್ಕರ

ಹಿಟ್ ಅಂಡ್ ರನ್ ಕಾನೂನು: ಜ. 17ರಿಂದ ಕರ್ನಾಟಕ ಲಾರಿ ಮಾಲೀಕರಿಂದ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಹಿಟ್ ಅಂಡ್ ರನ್ ಕಾನೂನಿನ ವಿರುದ್ಧ ಜನವರಿ 17ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ಲಾರಿ ಮಾಲೀಕರ ಸಂಘದ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೆಡರೇಷನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಸಿ. ನವೀನ್ ರೆಡ್ಡಿ, ಸಭೆಯಲ್ಲಿ ಅಸೋಸಿಯೇಷನ್‌ನ ಸದಸ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ವಿದೇಶಗಳಲ್ಲಿ ಅಪಘಾತ ಸಂಭವಿಸಿದಾಗ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಜಾಮೀನು ನೀಡಲು ಸ್ಥಳೀಯರ ಭದ್ರತೆ ಕೇಳಲಾಗುತ್ತದೆ. ಇದರಿಂದ ಲಾರಿ ಚಾಲಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಕೂಡಲೇ ಪ್ರಸ್ತಾವಿತ ಕಾಯ್ದೆಯಲ್ಲಿ ಇರುವ ಈ ಅಂಶವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಅಪಘಾತಗಳ ಸಂದರ್ಭದಲ್ಲಿ ಟ್ರಕ್‌ಗಳನ್ನು ವಶಪಡಿಸಿಕೊಳ್ಳುವುದು ಮತ್ತು ಅನಗತ್ಯ ಸಂಚಾರ ದಟ್ಟಣೆ ನೆಪದಲ್ಲಿ ವಿಧಿಸುವುದು ಸೇರಿದಂತೆ ಇನ್ನತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

10 ವರ್ಷ ಜೈಲು ಶಿಕ್ಷೆ ಸೇರಿದಂತೆ ಭಾರಿ ದಂಡ ವಿಧಿಸುವ ಹೊಸ ಪ್ರಸ್ತಾವನೆಯಿಂದ ದೇಶಾದ್ಯಂತ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಟ್ರಕ್ ಮಾಲೀಕರನ್ನು ಅಥವಾ ಸಾರಿಗೆ ಸಂಸ್ಥೆಯ ಯಾರನ್ನೂ ಸಂಪರ್ಕಿಸದೆ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಈ ಕ್ರಮದಿಂದ ಚಾಲಕರು ವೃತ್ತಿ ಮುಂದುವರಿಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಲಿದೆ. ಉದ್ದೇಶಿತ ಕಾಯಿದೆಯಲ್ಲಿರುವ ಕಠಿಣ ಕಾನೂನುಗಳನ್ನು ಟ್ರಕ್ ಉದ್ಯಮ ಮತ್ತು ಚಾಲಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸಡಿಲಗೊಳಿಸಬೇಕು ಎಂದು ನವೀನ್ ರೆಡ್ಡಿ ಹೇಳಿದರು.

RELATED ARTICLES
- Advertisment -
Google search engine

Most Popular