Friday, April 18, 2025
Google search engine

Homeರಾಜ್ಯಸುದ್ದಿಜಾಲಹಿಟ್ನೇಹೆಬ್ಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ:ನೂತನ ನಿರ್ದೇಶಕರ ಆಯ್ಕೆ

ಹಿಟ್ನೇಹೆಬ್ಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ:ನೂತನ ನಿರ್ದೇಶಕರ ಆಯ್ಕೆ

ಪಿರಿಯಾಪಟ್ಟಣ: ಹಿಟ್ನೇಹೆಬ್ಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಅಧಿಕಾರ ಪಡೆಯುವಲ್ಲಿ ಸಫಲರಾದರು.
ಸಂಘದ ಆವರಣದಲ್ಲಿ 12 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 9 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ 3 ಮಂದಿ ಜಯಗಳಿಸಿದರು. ಫಲಿತಾಂಶ ಬಳಿಕ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ನೂತನ ನಿರ್ದೇಶಕರನ್ನು ಸನ್ಮಾನಿಸಿ ಸಂಭ್ರಮಾಚರಿಸಿದರು.
ಈ ಸಂದರ್ಭ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಜೆಡಿಎಸ್ ಮುಖಂಡ ವಿನೋದ್ ಕುಮಾರ್ ಅವರು ಮಾತನಾಡಿ ಹಿಟ್ನೆಹೆಬ್ಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಬಾರಿಯೂ ಜೆಡಿಎಸ್ ಬೆಂಬಲಿತರು ಅಧಿಕಾರದಲ್ಲಿದ್ದು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಹೆಚ್ಚು ಸ್ಥಾನ ಗಳಿಸಲು ಮತದಾನ ಮಾಡಿದ ಷೇರುದಾರ ಸದಸ್ಯರಿಗೆ ಧನ್ಯವಾದ ತಿಳಿಸಿ ಮಾಜಿ ಶಾಸಕ ಕೆ.ಮಹದೇವ್ ರವರ ಮಾರ್ಗದರ್ಶನದಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾರಣ ಸಹಕಾರ ಸಂಘದ ಸದಸ್ಯರು ನಮ್ಮನ್ನು ಆಯ್ಕೆ ಮಾಡಿದ್ದಾರೆ ಈ ಚುನಾವಣೆಯಲ್ಲಿ ನಮ್ಮ ಪಕ್ಷ ಬೆಂಬಲಿತ ಕಾರ್ಯಕರ್ತರು ಸಹ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ಪರಿಣಾಮ ಬಹು ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭ ಜೆಡಿಎಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಯಾದ ಕಗ್ಗುಂಡಿ ಹರೀಶ್, ಹೆಚ್.ಸಿ.ಮಹದೇವ್, ಹೆಚ್.ಎಸ್ ಕುಮಾರ್, ಚಂದ್ರ, ಈರೇಗೌಡ, ಕಾವೇರಮ್ಮ, ಹೆಚ್.ಡಿ ಮಹದೇವ್, ಮಹೇಶ್ ನಾಯ್ಕ, ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಹೆಚ್.ಪಿ ಅನೀಲ್ ಕುಮಾರ್, ಅಮೃತೇಶ್, ಪಾರ್ವತಮ್ಮ,
ಚುನಾವಣಾಧಿಕಾರಿಯಾಗಿ ಸಿಡಿಒ ಹಿತೇಂದ್ರ, ಸಿಇಓ ಜಯರಾಮ್, ಸಹಾಯಕ ಅಧಿಕಾರಿ ನಟರಾಜ್ ಮತ್ತು ಸಿಬ್ಬಂದಿ, ಮುಖಂಡರಾದ ಶಂಕರ್, ಮಹದೇವ್, ಮುತ್ತೇಗೌಡ, ವೀರಭದ್ರ ಮತ್ತಿತರಿದ್ದರು.


RELATED ARTICLES
- Advertisment -
Google search engine

Most Popular