Saturday, April 19, 2025
Google search engine

Homeಸಿನಿಮಾರೈತರಿಗೆ ಬೆಳೆ ವಿಮೆ ಮಾಡಿಸಲು ಎಚ್.ಎಲ್ ನಾಗರಾಜ್ ಸಲಹೆ

ರೈತರಿಗೆ ಬೆಳೆ ವಿಮೆ ಮಾಡಿಸಲು ಎಚ್.ಎಲ್ ನಾಗರಾಜ್ ಸಲಹೆ


ಮಂಡ್ಯ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಗೆ ಅತ್ಯಂತ ಉಪಯುಕ್ತವಾಗಿದ್ದು, ರೈತರು ತಪ್ಪದೇ ಹೆಸರು ನೊಂದಾಯಿಸಿಕೊಂಡು ವಿಮೆ ಹಣ ಪಾವತಿಸುವಂತೆ ಅಪರ ಜಿಲ್ಲಾಧಿಕಾರಿ ಡಾ:ಎಚ್.ಎಲ್ ನಾಗರಾಜ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಮಳವಳ್ಳಿ ತಾಲ್ಲೂಕಿನ ಶೆಟ್ಟಿಹಳ್ಳಿಯ ಮಲ್ಲೇಗೌಡ ಎಂಬ ರೈತ ೨೦೨೨-೨೩ ಮುಂಗಾರು ಹಂಗಾಮಿನಲ್ಲಿ ಭತ್ತ ನೀರಾವರಿಯ ೧.೯೮ ಹೆಕ್ಟೇರ್ ಪ್ರದೇಶಕ್ಕೆ ೩೪೦೯ ವಿಮಾ ಕಂತು ಪಾವತಿಸಿ ಬೆಳೆ ಕಟಾವು ಫಲಿತಾಂಶದ ಅನ್ವಯ ಕಡಿಮೆ ಇಳುವರಿಯ ವಿಮಾ ಮಾರ್ಗಸೂಚಿ ಅನ್ವಯ ೧,೧೫,೧೦೦/- ರೂ ವಿಮಾ ಹಣ ಪಡೆದಿರುತ್ತಾರೆ. ಬೆಳೆ ವಿಮೆ ಬಿತ್ತನೆಯಿಂದ ಕೊಯ್ಲು ಆಗುವವರೆಗೂ ವಿಮೆಗೆ ಬೆಳೆ ಒಳಪಡುತ್ತದೆ ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕಿದೆ. ಕೃಷಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರು ಬೆಳೆ ವಿಮೆ ನೊಂದಾಯಿಸಿಕೊಳ್ಳುವಂತೆ ಮಾಡಿ ಎಂದರು.
ರೈತರು ವಿಮಾ ಮೊತ್ತದ ಶೇ.೨ ರಷ್ಟು ಪಾವತಿ ಮಾಡಬೇಕಿದ್ದು, ಭತ್ತ ನೀರಾವರಿಗೆ ಎಕರೆಗೆ- ರೂ ೭೫೫/-, ಹೆಕ್ಟೇರಿಗೆ- ರೂ೧೮೬೫/-, ಮುಸುಕಿನ ಜೋಳ ನೀರಾವರಿ ಎಕರೆಗೆ- ರೂ ೫೨೨/-, ಹೆಕ್ಟೇರಿಗೆ- ರೂ೧೨೯೦/-, ಮುಸುಕಿನ ಜೋಳ ಮಳೆಆಶ್ರಿತ ಎಕರೆಗೆ- ರೂ ೪೫೩/-, ಹೆಕ್ಟೇರಿಗೆ- ರೂ೧೧೩೦/-, ರಾಗಿ ನೀರಾವರಿ ಎಕರೆಗೆ- ರೂ ೪೧೧/-, ಹೆಕ್ಟೇರಿಗೆ- ರೂ೧೦೧೫/-, ರಾಗಿ ಮಳೆಆಶ್ರಿತ ಎಕರೆಗೆ- ರೂ ೩೪೪/-, ಹೆಕ್ಟೇರಿಗೆ- ರೂ೮೫೦/-,ಹುರಳಿ ಮಳೆಆಶ್ರಿತ ಎಕರೆಗೆ- ರೂ ೧೬೬/-, ಹೆಕ್ಟೇರಿಗೆ- ರೂ೪೧೦/- ವಿಮಾ ಕಂತು ಪಾವತಿಸಲು ಆಗಸ್ಟ್ ೧೬ ಕೊನೆಯ ದಿನಾಂಕವಾಗಿರುತ್ತದೆ ಎಂದರು.
ನೆಲಗಡಲೆ ಮಳೆಆಶ್ರಿತ ಎಕರೆಗೆ- ರೂ ೪೪೧/-, ಹೆಕ್ಟೇರಿಗೆ- ರೂ೧೦೯೦/-, ಅಲಸಂದೆ ಮಳೆಆಶ್ರಿತ ಎಕರೆಗೆ- ರೂ ೨೪೩/-, ಹೆಕ್ಟೇರಿಗೆ- ರೂ ೬೦೦/-, ಟೊಮ್ಯಾಟೋ ಎಕರೆಗೆ- ರೂ ೨೮೬೩/-, ಹೆಕ್ಟೇರಿಗೆ- ರೂ೭೦೭೫/-, ಎಲೆಕೋಸು ಎಕರೆಗೆ- ರೂ ೧೫೨೩/-, ಹೆಕ್ಟೇರಿಗೆ- ರೂ೩೭೭೫/-ವಿಮಾ ಕಂತು ಪಾವತಿಸಲು ಜುಲೈ ೧೫ ಕೊನೆಯ ದಿನಾಂಕವಾಗಿರುತ್ತದೆ ಹಾಗೂ ತೊಗರಿ( ಮಳೆ ಆಶ್ರಿತ) ಎಕರೆಗೆ- ರೂ ೩೮೮/-, ಹೆಕ್ಟೇರಿಗೆ- ರೂ೯೬೦/-ವಿಮಾ ಕಂತು ಪಾವತಿಸಲು ಜುಲೈ ೩೧ ಕೊನೆಯ ದಿನಾಂಕವಾಗಿರುತ್ತದೆ ಎಂದರು.
ಕೃಷಿ ವಿಮೆ ವಿವರ ಕುರಿತ ಕರಪತ್ರವನ್ನು ಕೃಷಿ ಇಲಾಖೆ ಅವರು ಹೊರತಂದಿದ್ದು, ಕರಪತ್ರಗಳು ಜಿಲ್ಲೆಯ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ, ಹಾಲಿನ ಡೈರಿ, ರೈತ ಸಂಪರ್ಕ ಕೇಂದ್ರ, ರೈತರು ಹೆಚ್ಚು ಸೇರುವ ಸ್ಥಳಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಿ. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರೈತರು ಬ್ಯಾಂಕ್‌ಗೆ ಬಂದಾಗ ಸೌಜನ್ಯದಿಂದ ವರ್ತಿಸಿ ಅವರಿಗೆ ಅಗತ್ಯ ಮಾಹಿತಿ ನೀಡಿ ವಿಮೆ ನೊಂದಣಿಗೆ ಪ್ರೋತ್ಸಾಹಿಸಿ ಎಂದರು.
ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ೨೫೩೧೬ ರೈತರು ಒಟ್ಟು ೫೧.೩೮ ಲಕ್ಷ ರೂ ವಿಮಾ ಕಂತು ಪಾವತಿಸಿರುತ್ತಾರೆ. ೨೫೩೧೬ ರೈತರಿಗೆ ವಿಮೆ ಕಂತು ಪಾವತಿ ಮಾಡಿದ ಹಿನ್ನಲೆಯಲ್ಲಿ ವಿವಿಧ ಸಂದರ್ಭದಲ್ಲಿ ಬೆಳೆಗೆ ಉಂಟಾದ ತೊಂದರೆಗಳಿಗೆ ಬೆಳೆ ವಿಮಾ ಮಾರ್ಗಸೂಚಿ ಅನ್ವಯ ೧೪.೯೬ ಕೋಟಿ ರೂ ಪಾವತಿಸಲಾಗಿದೆ ಎಂದರು.
ಕೃಷಿ ಇಲಾಖೆ ಉಪನಿರ್ದೇಶಕಿ ಮಾಲತಿ ಅವರು ಮಾತನಾಡಿ ಪ್ರಸ್ತುತ ಸಾಲಿನಲ್ಲಿ ಒಟ್ಟು ೧೨೩೭೫ ಕ್ವಿಂಟಲ್ ವಿವಿಧ ಬೆಳೆಗಳ ಬಿತ್ತನೆ ಬೀಜ ಅಗತ್ಯವಿರುತ್ತದೆ. ಪ್ರಸ್ತುತ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ, ಉದ್ದು ಬೆಳೆಗಳ ಒಟ್ಟು ೧೪೧ ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಪಡೆಯಲಾಗಿದ್ದು, ಇದುವರೆಗೂ ೧೨೫ ಕ್ವಿಂಟಲ್ ವಿತರಣೆಯಾಗಿದೆ ಎಂದರು.
ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ ಮತ್ತು ರಾಗಿ ಬೆಳೆಗಳ ಬಿತ್ತನೆ ಬೀಜವನ್ನು ಕರ್ನಾಟಕ ರಾಜ್ಯ ಬೀಜ ನಿಗಮ ೯೫೯೧ ಕ್ವಿಂಟಲ್ ಮತ್ತು ರಾಷ್ಟ್ರೀಯ ಬೀಜ ನಿಗಮ ೨೯೦೦ ಕ್ವಿಂಟಲ್ ಮತ್ತು ಎನ್‌ಎಸ್‌ಪಿ ೧೯೪೮ ಕ್ವಿಂಟಲ್ ಗೋದಾಮುಗಳಲ್ಲಿ ದಾಸ್ತಾನು ಇರಿಸಲಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಜೂನ್, ಜುಲೈ ಮಾಹೆಗಳಲ್ಲಿ ಸಹಾಯಧನದಲ್ಲಿ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.
ಪ್ರಸ್ತುತ ರಸಗೊಬ್ಬರ ಕೊರತೆ ಇರುವುದಿಲ್ಲ. ಮುಂಗಾರು ಹಂಗಾಮಿಗೆ ಒಟ್ಟು ೮೮೯೦೪ ಮೆ. ಟನ್ ರಸಗೊಬ್ಬರದ ಅವಶ್ಯಕತೆ ಇರುತ್ತದೆ. ಏಪ್ರಿಲ್ ನಿಂದ ಜೂನ್ ಮಾಹೆ ವರೆಗೆ ೪೧೬೪೨ ಮೆ. ಟನ್ ಗುರಿ ಇದ್ದು ೪೯೪೭೦ ಮೆ. ಟನ್ ಸರಬರಾಜು ಪಡೆಯಲಾಗಿರುತ್ತದೆ ನಿಗದಿಪಡಿಸಿರುವ ರಸಗೊಬ್ಬರವನ್ನು ಮುಂದಿನ ದಿನಗಳಲ್ಲಿ ಪಡೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ೨೮೩೧೭ ಮೆ.ಟನ್ ೭೯೭೦ ಮೆ.ಟನ್ ಕಾಪು ದಾಸ್ತಾನು ಚಿಲ್ಲರೆ ಮಾರಾಟಗಾರರಲ್ಲಿ ೨೦೩೪೭ ಮೆ.ಟನ್ ರಸಗೊಬ್ಬರ ದಾಸ್ತಾನು ಇದ್ದು ಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ತೋಟಗಾರಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಮತ, ಕೃಷಿ ವಿ.ವಿಯ ಅರ್ಪಿತಾ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular