ಹೊಸೂರು : ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಷೇರುದಾರ ರೈತರಿಗೆ ಕೆ.ಸಿ.ಸಿ ಸೇರಿದಂತೆ ವಿವಿಧ ಸಾಲದಡಿ 9.46ಕೋಟಿ ಸಾಲವನ್ನು ವಿತರಿಸಿದೆ ಎಂದು ಸಂಘದ ಅಧ್ಯಕ್ಷೆ ಕಮಲಮ್ಮ ಶಿವಣ್ಣ ಹೇಳಿದರು.
ಸಂಘದ ಗೋದಾಮಿನಲ್ಲಿ ನಡೆದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆ.ಸಿ.ಸಿ ಸಾಲವನ್ನು ಪ್ರಸಕ್ತ ವರ್ಷದಿಂದ ಜಿಲ್ಲಾ ಬ್ಯಾಂಕಿನ ಸಹಕಾರ ದಿಂದ 10 ಕೋಟಿರೂಗಳಿಗೆ ಹೆಚ್ಚಿಸಲು ಆಡಳಿತ ಮಂಡಳಿಯು ತಿರ್ಮಾನಿಸಿದೆ ಎಂದರು.
2022-23 ನೇ ಸಾಲಿನಲ್ಲಿ ಸಂಘವು 3.26 ಲಕ್ಷ ರೂಗಳ ಲಾಭವನ್ನು ಗಳಿಸಿದ್ದು ವ್ಯಾಪಾರ ಲಾಭವಾಗಿ 10.70 ಲಕ್ಷ ರೂಗಳನ್ನು ಗಳಿಸಿದ್ದು ಸಂಘದ ಸದಸ್ಯರಿಂದ ವಿವಿಧ ಸಾಲವಾಗಿ ನೀಡಿರುವ 10.23 ಕೋಟಿ ರೂ ಸಾಲ ಸಂಘಕ್ಕೆ ವಾಪಸ್ ಬರಬೇಕಿದ್ದು ಶೇ.99 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಬೋರ್ ವೆಲ್ ,ಟ್ಯಾಕ್ಟರ್,ಪವರ್ ಟಿಲ್ಲರ್,ದ್ವಿಚಕ್ರ ವಾಹನಗಳ ಸಾಲ ನೀಡಲು ತಿರ್ಮಾನಿಸಲಾಗಿದೆ ಎಂದು ಕಮಲಮ್ಮ ಶಿವಣ್ಣ ತಿಳಿಸಿದರು.
ಸಭೆಯಲ್ಲಿ ಅವರು ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಸ್.ಟಿ.ಕೀರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಗೌಡ, ಮಾಜಿ ನಿರ್ದೇಶಕರಾದ ಕೆ.ಮಹದೇವ್,ಶಿವಸ್ವಾಮಿ, ಶಿಕ್ಷಕ ಎ.ಕುಚೇಲ್, ಸಂಘದ ಮಾಜಿ ಅಧ್ಯಕ್ಷರಾದ ಎಚ್.ಆರ್.ಮಧುಚಂದ್ರ, ಎಚ್.ಎಸ್.ಶ್ರೀನಿವಾಸ್, ಮಾಜಿ ಗ್ರಾ.ಪಂ.ಸದಸ್ಯ ಜಯಣ್ಣ , ವಕೀಲ ಪಣಿ,ಕೃಷಿಕ ಸಮಾಜದ ನಿರ್ದೇಶಕ ಡಿ.ಸಿ.ರಾಮೇಗೌಡ ಸಂಘದ ಅಭಿವೃದ್ದಿ ಕುರಿತು ಮತ್ತು ಮುಂದೆ ಸಂಘದಿಂದ ರೈತರಿಗೆ ಕೈಗೊಳ್ಳ ಬಹುದಾದ ರೈತಪರ ಕೆಲಸಗಳ ಕುರಿತು ಸಲಹೆ ನೀಡಿ ಮಾತನಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಬಿ.ನವೀನ್ ಕುಮಾರ್, ನಿರ್ದೇಶಕರಾದ ಹುಚ್ಚೇಗೌಡ ವಿವೇಕನಂದ, ಪಾರ್ಥಯ್ಯ, ಕೆಂಪನಾಯಕ,ಎಚ್.ಆರ್.ಕೃಷ್ಣಮೂರ್ತಿ,ಸಿಎಂ.ರಾಜೇಗೌಡ,ಎಚ್.ಎಸ್.ಜಗದೀಶ್,ಎಚ್.ಎನ್.ರಮೇಶ್,ಕಲ್ಯಾಣಮ್ಮ, ಮುಖಂಡರಾದ ಡೈರಿಮಾದು, ಹಳಿಯೂರುಪ್ರಭಾಕರ್, ಎಲ್.ಐ.ಸಿ.ಜಗದೀಶ್,ಆನಂತ, ತಾ.ಪಂ.ಮಾಜಿ ಸದಸ್ಯ ಎಚ್.ಟಿ.ಲೋಕೇಶ್,ಡಾ.ಗೋಪಾಲೇಗೌಡ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಭಾಸ್ಕರ್, ಮಾಜಿ ಸದಸ್ಯ ರಮೇಶ್, ಮಹಾಲಿಂಗು, ಹೊಸೂರು ಡೈರಿ ಮಾಜಿ ಅಧ್ಯಕ್ಷ ಎಚ್.ಕೆ.ಶಿವಣ್ಣ, ನಿರ್ದೇಶಕರಾದ ಸ್ವಾಮಿ, ಬುದ್ದಿಸಾಗರ್ ಸಂಘದ ಸಿಇಓ ಚಂದ್ರಕಲಾಪಾಪೇಗೌಡ, ಸಿಬ್ಬಂದಿಗಳಾದರವಿ ಅರುಣ,ರಂಜು, ಸಂತೋಷ್, ಹಾಜರಿದ್ದರು.
ಗೈರು : ಟೀಕೆ
ಸರ್ವ ಸದಸ್ಯರ ಸಭೆಗೆ ಪ್ರಮುಖವಾಗಿ ಹಾಜರಿ ಇರಬೇಕಾದ ಮೈಸೂರು ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಎಂ.ಸತೀಶ್ ಗೈರು ಹಾಜರಿ ರೈತರ ಟೀಕೆಗೆ ಗುರಿಯಾಯಿತು.
ವಕೀಲನ ಪ್ರಶ್ನೆಗೆ 3 ಗಂಟೆ ತತ್ತರಿಸಿದ ಸಭೆ:
ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಷೇರುದಾರ ವಕೀಲ ಪಣಿ ಅವರು ಕೇಳಿದ ಪ್ರಶ್ನೆಗೆ ಸಭೆ 3 ಗಂಟೆ ತತ್ತರಿಸಿದ ಘಟನೆ ನಡೆಯಿತು.
ಎಷ್ಟು ಮಂದಿಗೆ ವೈಯುಕ್ತಿಕ ಲೋನ್ ನೀಡಿದ್ದಿರಿ, ದಾರ್ಮಿಕ ದೇವಾಲಯಗಳಿಗೆ ಅನುದಾನ ನೀಡದಿರುವುದು, ಮತ್ತು ಸಂಘದ ಮಾಜಿ ಅಧ್ಯಕ್ಷರ ಪುತ್ರ ವಕೀಲನಿಗೆ ಎಷ್ಟು ಸಂಭಾವನೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಸಭೆ ಇದನ್ನು ಪರಿಶೀಲನೆ ನಡೆಸಿ ಉತ್ತರ ನೀಡುವುದಾಗಿ ತಿಳಿಸಿತು.