Monday, April 21, 2025
Google search engine

Homeಅಪರಾಧಹೊಳೆಹೊನ್ನೂರು: ಅಪ್ರಾಪ್ತ ಮಗನಿಂದ ತಂದೆಯ ಕೊಲೆ: ಪ್ರಕರಣ ದಾಖಲು

ಹೊಳೆಹೊನ್ನೂರು: ಅಪ್ರಾಪ್ತ ಮಗನಿಂದ ತಂದೆಯ ಕೊಲೆ: ಪ್ರಕರಣ ದಾಖಲು

ಹೊಳೆಹೊನ್ನೂರು: ಅಪ್ರಾಪ್ತ ಮಗನೋರ್ವ ತಂದೆಯನ್ನೇ ಕೊಲೆ ಮಾಡಿದ ಘಟನೆ ಸಮೀಪದ ಅರಬೀಳಚಿ ಕ್ಯಾಂಪ್ ಗ್ರಾಮದಲ್ಲಿ ನಡೆದಿದೆ.

ಶುಕ್ರರಾಜ್ ಯಾನೆ ಶುಕ್ರ(50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಪಂಚಾಯತ್ ಕೆಲಸಕ್ಕೆ ಹೋಗುತ್ತಿದ್ದ ಶುಕ್ರನ ಪತ್ನಿ ಶಿಲ್ಪರಿಗೆ ಕೆಲಸಕ್ಕೆ ಹೋಗದಂತೆ ಆಗಾಗ್ಗೆ ಬುದ್ದಿ‌ ಹೇಳುತ್ತಿದ್ದರು. ಪತಿಯ ಮಾತನ್ನು ನಿರ್ಲಕ್ಷಿಸಿ ಶಿಲ್ಪ ಕೆಲಸಕ್ಕೆ ಹೋಗುವುದಾಗಿ ಪ್ರತಿಪಾದಿಸುತ್ತಿದ್ದರು. ಮಾತು ಕೇಳದೇ ಇದ್ದಾಗ ಇಬ್ಬರ ನಡುವೆ ಆಗಾಗ್ಗೆ ಜಗಳ ಉಂಟಾಗುತ್ತಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಗಲಾಟೆ ನಿನ್ನೆ ಇಬ್ವರ ನಡುವೆ ಮತ್ತೆ ಕಾಣಿಸಿಕೊಂಡಿದ್ದು, ಗಲಾಟೆಯಾಗುತ್ತಿದ್ದಾಗ ಶುಕ್ರರ ಪತ್ನಿ ಶಿಲ್ಪ ಅಪ್ರಾಪ್ತ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಕರೆ ಮಾಡಿದ ತಕ್ಷಣವೇ ಸ್ಥಳಕ್ಕೆ ಬಂದ ಮಗ ತಂದೆ ಶುಕ್ರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅಪ್ರಾಪ್ತನನ್ನ ಹೊಳೆಹೊನ್ನೂರು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಅಪ್ರಾಪ್ತ ಮಗನ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದೆ. ಘಟನೆಯೂ ನಿನ್ನೆ ಸಂಜೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶುಕ್ರರ ಪತ್ನಿ ಶಿಲ್ಪ ಮತ್ತು ಅತ್ತೆ ಪುಷ್ಪಮ್ಮ ಅವರನ್ನು ಠಾಣೆಗೆ ಕರೆತರಲಾಗಿದೆ.

ಶುಕ್ರರಾಜ್ ಜಮೀನಿನಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕನಾಗಿದ್ದಾನೆ. ‌ಅಪ್ರಾಪ್ತ ಮಗ ಯಾವುದೇ ವಿದ್ಯಾಭ್ಯಾಸವೂ ಮಾಡುತ್ತಿರಲಿಲ್ಲ ಹಾಗೂ ಕೆಲಸಕ್ಕೂ ಹೋಗುತ್ತಿರಲಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ.

25 ವರ್ಷದ ಹಿಂದೆ ಶಿಲ್ಪ ಮತ್ತು ಶುಕ್ರ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.

ಮದುವೆಯಾದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಮೂರು ವರ್ಷದ ಹಿಂದೆ ಪಂಚಾಯತ್ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯ ವಿರುದ್ಧ ಶುಕ್ರರಾಜ್ ನಿಗೆ ಬೇಸರವಿದ್ದು‌, ಆಕ್ಷೇಪಿಸುತ್ತಿದ್ದ.

ಈ ಕಾರಣದಿಂದಲೇ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ಮೃತನ ಸಹೋದರ ಕುಬೇರಪ್ಪ ಮಾಹಿತಿ ನೀಡಿದ್ದಾರೆ.

ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular