Friday, April 11, 2025
Google search engine

Homeಸಿನಿಮಾಸ್ಕೈಪ್ ಮೂಲಕ ಕನ್ನಡದ 'ರೋಡ್ ಕಿಂಗ್' ಸಿನಿಮಾ ನಿರ್ದೇಶನ ಮಾಡಿದ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್

ಸ್ಕೈಪ್ ಮೂಲಕ ಕನ್ನಡದ ‘ರೋಡ್ ಕಿಂಗ್’ ಸಿನಿಮಾ ನಿರ್ದೇಶನ ಮಾಡಿದ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್

ಕೊರೊನಾ ನಂತರ ಇಂಟರ್ ನೆಟ್ ಬಳಕೆ ಬಹಳ ಹೆಚ್ಚಾಗಿದೆ. ಈಗ ಹೆಚ್ಚಾಗಿ ಎಲ್ಲಾ ಆನ್ ಲೈನ್ ನಲ್ಲೇ ನಡೆಯುತ್ತಿದೆ. ಆದರೆ ಕೊರೊನಾನ ಪೂರ್ವದಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ‘ರೋಡ್ ಕಿಂಗ್’ ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಿದ್ದಾರೆ. ಆಗಿನ ಪ್ರಕಾರ ಈ ರೀತಿ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ಇದೇ ಮೊದಲು. ಈ ಚಿತ್ರ ಇದೇ 23 ರಂದು ಬಿಡುಗಡೆಯಾಗುತ್ತಿದೆ.

ಹಾಲಿವುಡ್ ನ ರಾಂಡಿ ಕೆಂಟ್ ಅವರ ಬಳಿ ಈ ಚಿತ್ರವನ್ನು ನಿರ್ದೇಶನ ಮಾಡಿಸಬೇಕೆಂದುಕೊಂಡು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ವೀಸಾ ಸಮಸ್ಯೆಯಿಂದ ರಾಂಡಿ ಅವರು ಭಾರತಕ್ಕೆ ಬರಲಾಗಲಿಲ್ಲ. ಆಗ ಏನು ಮಾಡಬೇಕೆಂದು ಹೊಳೆಯಲಿಲ್ಲ. ಹೀಗೆ ಯೋಚಿಸುತ್ತಿದ್ದಾಗ ಸ್ಕೈಪ್ ಮೂಲಕ ನಿರ್ದೇಶನ ಮಾಡಿಸಿದರೆ ಹೇಗೆ? ಎಂದು ನನ್ನ ಮಿತ್ರ ಭುವನ್ ಬಳಿ ಹೇಳಿದೆ. ಆನಂತರ ಸ್ಕೈಪ್ ಮೂಲಕವೇ ರಾಂಡಿ ಅವರು ಅಮೇರಿಕಾದಿಂದ ಈ ಚಿತ್ರ ನಿರ್ದೇಶನ ಮಾಡಿದರು. ಹಲವು ಕಾರಣಾಂತರದಿಂದ ಚಿತ್ರ ತೆರೆಗೆ ಬರುವುದು ತಡವಾಯಿತು. ಜೂನ್ 23 ಚಿತ್ರ ಬಿಡುಗಡೆಯಾಗಲಿದೆ. ನಾನೇ ಚಿತ್ರಕ್ಕೆ ಕಥೆ ಬರೆದಿದ್ದೇನೆ. ನಾಯಕನಾಗಿಯೂ ನಟಿಸಿದ್ದೇನೆ ಎಂದರು ಮತೀನ್ ಹುಸೇನ್.

ನಾನು ಹಾಲಿವುಡ್ ನಲ್ಲಿ ಹದಿಮೂರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಸ್ಕೈಪ್ ಮೂಲಕ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಿದ್ದು ನನಗೆ ಖಷಿಯಾಗಿದೆ ಎಂದರು ನಿರ್ದೇಶಕ ರಾಂಡಿ ಕೆಂಟ್.

‘ರೋಡ್ ಕಿಂಗ್’ ಚಿತ್ರದ ಕಥೆ ಚೆನ್ನಾಗಿದೆ. ಸದ್ಯದಲ್ಲೇ ‘ರೋಡ್ ಕಿಂಗ್ 2’ ಚಿತ್ರವನ್ನು ಆರಂಭಿಸುವುದಾಗಿ ನಿರ್ಮಾಪಕ ದಿಲೀಪ್ ಕುಮಾರ್ ತಿಳಿಸಿದರು.

ರಾಂಡಿ ಕೆಂಟ್ ಅವರು ನಿರ್ದೇಶನ ಮಾಡಿದ ಪರಿಯನ್ನು ವಿಸ್ತಾರವಾಗಿ ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ವಿವರಿಸಿದರು.

ಚಿತ್ರದಲ್ಲಿ ನಟಿಸಿರುವ ಲೀಲಾ ಮೋಹನ್, ಹರೀಶ್ ಕುಮಾರ್ ಹಾಗೂ ಭುವನ್ ರಾಜ್ ಚಿತ್ರದ ಕುರಿತು ಮಾತನಾಡಿದರು. ಚಿತ್ರದ ಹಾಡೊಂದನ್ನು ಹಾಡಿರುವ ಖ್ಯಾತ ಗಾಯಕ ಚಂದನ್ ಶೆಟ್ಟಿ ಸಹ ಚಿತ್ರತಂಡಕ್ಕೆ ಶುಭ ಕೋರಿದರು. ‘ರನ್ ಆಂಟೋನಿ’ ಖ್ಯಾತಿಯ ರುಕ್ಷಾರ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.

RELATED ARTICLES
- Advertisment -
Google search engine

Most Popular