Monday, April 21, 2025
Google search engine

Homeರಾಜ್ಯನೂತನ ಟ್ರಾಮಾ ಕೇರ್ ಸೆಂಟರ್ ಉದ್ಘಾಟಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್

ನೂತನ ಟ್ರಾಮಾ ಕೇರ್ ಸೆಂಟರ್ ಉದ್ಘಾಟಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್


ತುಮಕೂರು: ಜಿಲ್ಲೆಯಲ್ಲಿ ಅಪಘಾತ ಪ್ರಕರಣ ನಿತ್ಯ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಗಾಯಾಳುಗಳನ್ನು ೭೦ ಕಿ.ಮೀ. ದೂರದ ಬೆಂಗಳೂರಿಗೆ ಕಳಿಸಬೇಕಿತ್ತು. ಹೀಗಾಗಿ ಜಿಲ್ಲೆಯಲ್ಲಿ ಟ್ರಾಮಾ ಸೆಂಟರ್ ಆರಂಭಿಸಬೇಕೆಂಬ ಬೇಡಿಕೆ ಇತ್ತು. ಬಹಳ ದಿನಗಳಿಂದ ಇದ್ದ ಬೇಡಿಕೆ ಈಗ ಈಡೇರಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನೂತನ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆ ಬಳಿಕ ಮಾತನಾಡಿದ ಅವರು, ೨೦೧೮-೧೯ನೇ ಸಾಲಿನಲ್ಲಿ ಟ್ರಾಮಾ ಸೆಂಟರ್‌ಗೆ ಮಂಜೂರಾತಿಯಾಗಿತ್ತು. ೫೬ ಕೋಟಿ ವೆಚ್ಚದ ಆಧುನಿಕ ಟ್ರಾಮಾ ಸೆಂಟರ್‌ಗೆ ಅಡಿಗಲ್ಲು ಹಾಕಿತ್ತು. ಮೂರು ತಿಂಗಳ ಹಿಂದೆ ಕಟ್ಟಡವನ್ನು ಸಿಎಂ ಉದ್ಘಾಟಿಸಿದ್ದರು ಎಂದು ಹೇಳಿದ್ದಾರೆ.

ಈಗ ಟ್ರಾಮಾ ಸೆಂಟರ್‌ಗೆ ಸಿಬ್ಬಂದಿ, ವೈದ್ಯಕೀಯ ಉಪಕರಣ ನೀಡಿದ್ದಾರೆ. ಹೀಗಾಗಿ ಟ್ರಾಮಾ ಸೆಂಟರ್ ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದೇವೆ. ಟ್ರಾಮಾ ಸೆಂಟರ್‌ನಲ್ಲಿ ಎರಡು ಮೇಜರ್ ಆಪರೇಷನ್ ಥಿಯೇಟರ್, ಎರಡು ನಾರ್ಮಲ್ ಆಪರೇಷನ್ ಥಿಯೇಟರ್, ಮೂರು ಐಸಿಯು ಇದೆ. ನೂರು ಬೆಡ್‌ಗಳ ಟ್ರಾಮಾ ಸೆಂಟರ್ ಬಡವರಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಒಟ್ಟು ೧೦೧೬ ಪೊಲೀಸ್ ಠಾಣೆಗಳಿವೆ

ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ವೆಪನ್ಸ್ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿವರ್ಷ ಸಂದರ್ಭಕ್ಕೆ ಅನುಗುಣವಾಗಿ ಟೆಕ್ನಾಲಜಿಯನ್ನ ಅಪ್ ಗ್ರೇಡ್ ಮಾಡಲಾಗುತ್ತೆ. ಅದು ನಿರಂತರವಾಗಿ ನಡೆಯುತ್ತೆ. ಇಡೀ ರಾಜ್ಯಕ್ಕೆ ಬೆಂಗಳೂರಿನಲ್ಲಿ ಕಮಾಂಡೋ ಸೆಂಟರ್ ಮಾಡಲಾಗುತ್ತಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಕಮಾಂಡೋ ಸೆಂಟರ್ ತೆರೆಯಲಾಗಿದೆ. ರಾಜ್ಯದಲ್ಲಿ ಒಟ್ಟು ೧೦೧೬ ಪೊಲೀಸ್ ಸ್ಟೇಷನ್ ಇದೆ. ಈಗಾಗಲೇ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ನಮ್ಮಲ್ಲಿ ನೇಮಕಾತಿ ಪ್ರಕ್ರಿಯೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಕಂಪ್ಲಿಟ್ ಮಾಡುತ್ತೀದ್ದೇವೆ. ಸದ್ಯಕ್ಕೆ ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಸ್ಟಾಪ್ ಆಗಿದೆ. ಸ್ಕ್ಯಾಮ್ ಆಗಿತ್ತಲ್ಲ ಆ ವಿಚಾರವಾಗಿ ತಿರ್ಮಾನಕ್ಕೆ ಕಾಯುತ್ತಿದ್ದೇವೆ. ಹಾಗಾದರೆ ೧ ಸಾವಿರ ಸಬ್ ಇನ್ಸ್ಪೆಕ್ಟರ್?ಗಳನ್ನ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular