ಮೈಸೂರು: ಗೃಹ ಸಚಿವ ಜಿ ಪರಮೇಶ್ವರ್ ಅವರ ಇತ್ತೀಚಿನ ಹೇಳಿಕೆಯನ್ನು ಗಮನಿಸಿದರೆ ಅವರಿಗೆ ರಾಜಕೀಯ ವೈರಾಗ್ಯ ಬಂದಂತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದರು.
ಅಂತಹ ಹೇಳಿಕೆ ನೀಡಿ ಏನು ಸಂದೇಶ ಕೊಡುತ್ತಿದ್ದೀರಿ? ಎಂದು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕೇಳಿದರು.
ಈ ಸರ್ಕಾರದಲ್ಲಿ ಯಾರಿಗೆ ರಕ್ಷಣೆ ಕೊಡುತ್ತಾರೆ? ಸಚಿವರ ಹೇಳಿಕೆ ಗಮನಿಸಿದರೆ ಅವರಿಗೆ ನಿಯಂತ್ರಣ ಇದೆಯಾ ಜನರು ಹಾಗೂ ಅಧಿಕಾರಿಗಳಿಗೆ ಏನು ಸಂದೇಶ ಕೊಡುತ್ತಿದ್ದೀರಿ? ಮರ್ಯಾದಸ್ಥರು ಈ ಸರ್ಕಾರದಲ್ಲಿ ಇರುವುದು ಒಳ್ಳೆಯದಲ್ಲ ಎಂಬ ತೀರ್ಮಾನಕ್ಕೆ ಸಚಿವ ಜಿ. ಪರಮೇಶ್ವರ್ ಬಂದಿರಬೇಕು ಎಂದು ಹೇಳಿದರು.