Friday, April 4, 2025
Google search engine

Homeಅಡುಗೆಮನೆಯಲ್ಲೇ ಮಾಡಿ ಸ್ವಾದಿಷ್ಟಕರ ಚೀಸ್ ಚಿಕನ್ ಬರ್ಗರ್

ಮನೆಯಲ್ಲೇ ಮಾಡಿ ಸ್ವಾದಿಷ್ಟಕರ ಚೀಸ್ ಚಿಕನ್ ಬರ್ಗರ್

ಈಗಿನ ಮಕ್ಕಳಿಗಂತೂ ಪಿಜ್ಜಾ, ಬರ್ಗರ್ ಸಿಕ್ಕಿಬಿಟ್ಟರೆ ಊಟತಿಂಡಿ ಏನು ಬೇಡ. ಪ್ರತಿದಿನ ಈ ರೀತಿಯಾದ ತಿನಿಸುಗಳೇ ಬೇಕು ಎಂದು ಪೋಷಕರ ಬಳಿ ಹಠ ಹಿಡಿಯುತ್ತಾರೆ. ಆದರೆ ಹೊರಗಡೆ ಲಭ್ಯವಿರುವ ಪಿಜ್ಜಾ ಬರ್ಗರ್ ಎಷ್ಟು ಆರೋಗ್ಯಕರ ಎಂಬ ಕಡೆ ತಂದೆತಾಯಂದಿರು ಗಮನಹರಿಸುವುದು ಉತ್ತಮ. ಹೊರಗಡೆಯಿಂದ ಈ ರೀತಿಯಾದ ತಿನಿಸುಗಳನ್ನು ತರಿಸುವ ಬದಲು ಮನೆಯಲ್ಲೇ ಅದನ್ನು ಮಾಡಿದರೇ ಶುಚಿತ್ವದೊಂದಿಗೆ ಆರೋಗ್ಯವೂ ಕೆಡುವುದಿಲ್ಲ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಚೀಸ್ ಚಿಕನ್ ಬರ್ಗರ್ ಯಾವ ರೀತಿ ಮಾಡುವುದು ಎಂಬದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:

ಚಿಕನ್ ಖೀಮಾ – 100 ಗ್ರಾಂ
ಬರ್ಗರ್ ಬನ್ – 4
ಬ್ರೆಡ್ ಕ್ರಂಬ್ಸ್ – 1 ಕಪ್
ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ವೃತ್ತಾಕಾರದಲ್ಲಿ ಹೆಚ್ಚಿದ ಟೊಮೆಟೋ – 2
ವೃತ್ತಾಕಾರದಲ್ಲಿ ಹೆಚ್ಚಿದ ಈರುಳ್ಳಿ – 2 (ಒಂದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ)
ಮಯೋನೀಸ್ – 2 ಚಮಚ
ಬೆಣ್ಣೆ – 2 ಚಮಚಮ
ಟೊಮೆಟೋ ಕೆಚಪ್ – 1 ಕಪ್
ಚೀಸ್ – 4
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ – ಅರ್ಧ ಚಮಚ
ಕೊತ್ತಂಬರಿ ಪುಡಿ – 1 ಚಮಚ

ಮಾಡುವ ವಿಧಾನ:

1) ಒಂದು ಬೋಗುಣಿಯಲ್ಲಿ ಖೀಮಾ ಮತ್ತು ಬ್ರೆಡ್ ಟೋಸ್ಟ್ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕಾಳುಮೆಣಸಿನ ಪುಡಿ, ಹೆಚ್ಚಿದ ಈರುಳ್ಳಿ, ಕೊತ್ತೊಂಬರಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
2) ಇನ್ನು ಇದನ್ನು ನಾಲ್ಕು ಪಾಲು ಮಾಡಿ ಎಣ್ಣೆಹಚ್ಚಿದ ತಟ್ಟೆಯ ಮೇಲೆ ಒಂದು ಬನ್ ವ್ಯಾಸದಷ್ಟು ಅಗಲಕ್ಕೆ ದಪ್ಪನೆಯ ರೊಟ್ಟಿಯಂತೆ ಲಟ್ಟಿಸಿ ಪಕ್ಕಕ್ಕಿಡಿ.
3) ದಪ್ಪತಳದ ಬಾಣಲೆಯೊಂದರಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಈ ನಾಲ್ಕೂ ರೊಟ್ಟಿಗಳನ್ನು ಬೇಯಿಸಿ. ನಡುನಡುವೆ ತಿರುವುತ್ತಾ ಎರಡೂ ಬದಿಗಳು ಸುಮಾರು ಕಂದು ಬಣ್ಣ ಬರುವಷ್ಟು ಬೇಯಿಸಿ. ಇದಕ್ಕೆ ಸುಮಾರು ಹದಿನೈದು ನಿಮಿಷ ಬೇಕಾಗುತ್ತದೆ.
4) ಈಗ ಮಯೋನೀಸ್ ಮತ್ತು ಟೊಮೇಟೊ ಕೆಚಪ್‌ಗಳನ್ನು ಒಂದು ಲೋಟಕ್ಕೆ ಹಾಕಿ ಚಮಚದಿಂದ ಚೆನ್ನಾಗಿ ಮಿಶ್ರಣಮಾಡಿ
5) ಈಗ ಬನ್‌ಗಳನ್ನು ನಡುವೆ ಅಡ್ಡಲಾಗಿ ಕತ್ತರಿಸಿ ಎರಡು ಬಿಲ್ಲೆಗಳನ್ನಾಗಿಸಿ. ಇದರ ಒಳಭಾಗಕ್ಕೆ ಬೆಣ್ಣೆ ಹಚ್ಚಿ ಕಾವಲಿಯ ಮೇಲೆ ಚಿಕ್ಕ ಉರಿಯಲ್ಲಿ ಬಿಸಿಮಾಡಿ.
6) ಬನ್ ಬಿಸಿಯಾದ ಬಳಿಕ ತಳಭಾಗದ ಬಿಲ್ಲೆಯ ಮೇಲೆ ಮೊದಲು ಮಾಯೋನೀಸ್ ಕೆಚಪ್ ಮಿಶ್ರಣವನ್ನು ಸವರಿ ಅದರ ಮೇಲೆ ವೃತ್ತಾಕಾರದ ಟೊಮೆಟೊ, ಈರುಳ್ಳಿ ಹಾಕಿ ಹರಡಿ ಅದರ ಮೇಲೆ ಚೀಸ್ ಹಾಕಿ. ಇದರ ಮೇಲೆ ಚಿಕನ್ ಖೈಮಾದ ಹುರಿದ ತುಂಡನ್ನಿಡಿ. ಇದರ ಮೇಲೆ ಬನ್‌ನ ಮೇಲಿನ ಭಾಗವನ್ನಿಡಿ.
7) ಹೀಗೇ ನಾಲ್ಕೂ ಬರ್ಗರ್‌ಗಳು ತಯಾರಾದ ಬಳಿಕ ಸರ್ವಿಂಗ್ ಪ್ಲೇಟ್‌ಗೆ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ.

RELATED ARTICLES
- Advertisment -
Google search engine

Most Popular