Friday, April 4, 2025
Google search engine

Homeರಾಜ್ಯಹನಿಟ್ರ‍್ಯಾಪ್ ಆರೋಪ ಮುಂದೆಯೂ ಬರಬಹುದು: ಬಾಂಬ್ ಸಿಡಿಸಿದ ರಾಜಣ್ಣ

ಹನಿಟ್ರ‍್ಯಾಪ್ ಆರೋಪ ಮುಂದೆಯೂ ಬರಬಹುದು: ಬಾಂಬ್ ಸಿಡಿಸಿದ ರಾಜಣ್ಣ

ಕೋಲಾರ: ಹನಿಟ್ರ‍್ಯಾಪ್ ಆರೋಪ ಮುಂದೆಯೂ ಬರಬಹುದು ಎಂದು ಸಚಿವ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಹನಿಟ್ರ‍್ಯಾಪ್ ವಿಚಾರವಾಗಿ ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹನಿಟ್ರ‍್ಯಾಪ್ ಕುರಿತು ವಿಧಾನಸಭೆಯಲ್ಲಿ ಹೇಳುವಷ್ಟು ಹೇಳಿದ್ದೇನೆ. ಅದನ್ನು ಹೊರತು ಪಡಿಸಿ ಹೇಳುವಷ್ಟು ಏನು ಇಲ್ಲ. ಈ ಆರೋಪ ಒಂದಲ್ಲ, ಕಡೆಯದೂ ಅಲ್ಲ, ಮುಂದೆಯೂ ಬರಬಹುದು ಎಂದು ತಿಳಿಸಿದರು.

ಹನಿಟ್ರ‍್ಯಾಪ್ ತನಿಖೆ ಕುರಿತು ಸಿಎಂ ಹಾಗೂ ಗೃಹಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು. ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರತಿದಿನ ಅವರ ಜೊತೆ ಮಾತನಾಡುವೆ ಎಂದರು. ವಿಧಾನಸಭೆಯಲ್ಲಿ ಶಾಸಕರ ಅಮಾನತು ವಿಷಯದಲ್ಲಿ ನಾನಾಗಿದಿದ್ದರೆ ಇನ್ನೂ ಮುಂಚಿತವಾಗಿ ಈ ಕೆಲಸ ಮಾಡುತ್ತಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕಪ್ಪು ಚುಕ್ಕೆ, ಜನಪರ ವಿಚಾರವನ್ನಿಟ್ಟುಕೊಂಡು ಶಾಸಕರು ಚರ್ಚೆ ಮಾಡುತ್ತಿಲ್ಲ. ಬಜೆಟ್ ಬಗ್ಗೆ 80 ಶಾಸಕರು ಪ್ರಸ್ತಾಪ ಮಾಡಿದ್ದಾರೆ, ಅದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ. ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ಅಡಚಣೆ ಮಾಡಲು ಈ ರೀತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಕಪ್ಪುಚುಕ್ಕೆ. ನಾನು ಸ್ಪೀಕರ್ ಆಗಿದ್ದರೆ ಮೊದಲೇ ಸಸ್ಪೆಂಡ್ ಮಾಡುತ್ತಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular