ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದ ನಿವಾಸಿ ಎಸ್. ನಂಜುAಡಶೆಟ್ಟಿ ರಾಹುಲ್‌ಗಾಂಧಿ ವಿಚಾರ ಮಂಚ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಇವರಿಗೆ ಹೊನ್ನೂರು-ಬೀಚಹಳ್ಳಿ ಗ್ರಾಮಸ್ಥರು ಇಲ್ಲಿನ ರಾಕಸಮ್ಮ ದೇಗುಲದ ಮುಂಭಾಗ ಬುಧವಾರ ರಾತ್ರಿ ಸನ್ಮಾನ ಮಾಡಿದರು.
ಈಚೆಗೆ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್. ಹೇಮಂತ್‌ಕುಮಾರ್ ನಂಜುಡಶೆಟ್ಟಿಗೆ ಆದೇಶ ಪತ್ರವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಸಾರ್ವಜನಿಕರಿಗೆ ತಿಳಿಸಿ ಸಾಮಾನ್ಯ ಜನರನ್ನು ಪಕ್ಷದ ಕಡೆಗೆ ಹೆಚ್ಚಾಗಿ ಆಕರ್ಷಿಸಿ ಪಕ್ಷವನ್ನು ಬಲಪಡಿಸಲಾಗುವುದು. ಹೆಚ್ಚಾಗಿ ಯುವಕರನ್ನು ಆಕರ್ಷಿಸಲು ಕಾರ್ಯಸೂತ್ರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗುರುಮಲ್ಲೇಶ್, ರಾಜೇಂದ್ರ, ಲೋಕೇಶ್, ಶ್ರೀಕಂಠ, ಸಿದ್ಧು, ದುಂಡಶೆಟ್ಟಿ, ಸಿದ್ದಪ್ಪಾಜಿ, ಲಿಂಗಯ್ಯ ಸೇರಿದಂತೆ ಅನೇಕರು ಇದ್ದರು.