Sunday, August 31, 2025
Google search engine

Homeಅಪರಾಧಮರ್ಯಾದೆ ಹತ್ಯೆ ಕೇಸ್ : ಮಗಳನ್ನ ಸುಟ್ಟು ಕೊಂದ ತಂದೆ ಸೇರಿ ಮೂವರು ಬಂಧನ

ಮರ್ಯಾದೆ ಹತ್ಯೆ ಕೇಸ್ : ಮಗಳನ್ನ ಸುಟ್ಟು ಕೊಂದ ತಂದೆ ಸೇರಿ ಮೂವರು ಬಂಧನ

ಕಲಬುರ್ಗಿ : ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನ ತಂದೆ ಹಾಗೂ ಕುಟುಂಬಸ್ಥರು ಸೇರಿ ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ತಂದೆ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಘಟನೆ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಮೃತಳ ತಂದೆ ಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾವೇ ಕೊಂದಿರುವುದಾಗಿ ಹೇಳಿದ್ದಾರೆ.ಹೀಗಾಗಿ, ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸ್ಥಳಕ್ಕೆ ಸೊಕೋ ತಂಡವನ್ನು ಕಳುಹಿಸಲಾಗಿದೆ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಮಾಡಲಾಗುತ್ತಿದೆ.

ಘಟನೆ ಹಿನ್ನೆಲೆ?: ಮೃತಪಟ್ಟ ಯುವತಿ ಕವಿತಾ ಎಂಬುದು ಗೊತ್ತಾಗಿದೆ. ಗ್ರಾಮದಲ್ಲಿ ಪೋಷಕರೊಂದಿಗೆ ವಾಸವಾಗಿದ್ದಳು. ತಂದೆ ಶಂಕರ್ ಕೊಳ್ಳೂರ್ ಕೃಷಿಕ. ಶಂಕರ್​ಗೆ ಐವರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಕೊಲೆಯಾದ 18 ವರ್ಷದ ಕವಿತಾ ನಾಲ್ಕನೆಯವಳು. ಪಿಯುಸಿ ಮುಗಿಸಿ ನರ್ಸಿಂಗ್ ಓದುತಿದ್ದಳು. ಕವಿತಾ ತನ್ನ ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಲವ್ ವಿಚಾರ ಮನೆಯವರಿಗೆ ಕಳೆದ ಮೂರು ತಿಂಗಳ ಹಿಂದೆ ಗೊತ್ತಾಗಿತ್ತು.

ಮಗಳ ಪ್ರೀತಿಗೆ ತಂದೆ-ತಾಯಿಯ ವಿರೋಧ ಇತ್ತು. ತಂದೆ ಶಂಕರ್ ಹಲವಾರು ಬಾರಿ ಮಗಳಿಗೆ ಬುದ್ದಿವಾದ ಹೇಳಿದ್ದಾರೆ‌. ಆ ಯುವಕನನ್ನು ಬಿಟ್ಟುಬಿಡು ಅಂತ ಒತ್ತಾಯ ಮಾಡಿದ್ದಾರೆ. ಆದರೂ ಕವಿತಾ ಮಾತ್ರ ಲವ್ ಮಾಡಿದ್ದೇನೆ, ಆತನನ್ನೇ ಮದುವೆ ಆಗುವುದಾಗಿ ಹಠ ಹಿಡಿದಿದ್ದಳು. ಎಷ್ಟೇ ಬುದ್ದಿ ಹೇಳಿದರೂ ಕೇಳದೇ ಇದ್ದಾಗ, ಮಾನ ಮರ್ಯಾದೆಗೆ ಅಂಜಿ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ತಂದೆ ಒಪ್ಪಿಕೊಂಡಿದ್ದಾರೆ. ಮಗಳನ್ನು ಕೊಲೆ ಮಾಡಿದ ಬಳಿಕ ಕ್ರಿಮಿನಾಶಕವನ್ನು ಮಗಳ ಬಾಯಿ ಮೇಲೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿ ಜನರಿಗೆ ಹೇಳಿದ್ದಾರೆ.

ತರಾತುರಿಯಲ್ಲಿ ತನ್ನ ಸಹೋದರನ ಜಮೀನಿನಲ್ಲಿ ಮೃತದೇಹ ಸುಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಇಬ್ಬರು ಸಹಾಯ ಮಾಡಿದ್ದಾರೆ ಎಂದು ಗೊತ್ತಾಗಿದೆ. ಒಟ್ಟು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ತಿಳಿಸಿದರು.

RELATED ARTICLES
- Advertisment -
Google search engine

Most Popular