Monday, April 21, 2025
Google search engine

Homeಅಪರಾಧಮರ್ಯಾದಾ ಹತ್ಯೆ: ಮಗಳು, ಆಕೆಯ ಪ್ರೇಮಿಯನ್ನು ಕೊಂದ ತಂದೆ

ಮರ್ಯಾದಾ ಹತ್ಯೆ: ಮಗಳು, ಆಕೆಯ ಪ್ರೇಮಿಯನ್ನು ಕೊಂದ ತಂದೆ

ಉತ್ತರ ಪ್ರದೇಶ: ಮಧ್ಯರಾತ್ರಿ ಪ್ರಿಯಕರನನ್ನು ಭೇಟಿಯಾಗಲು ಹೋಗಿದ್ದ ಮಗಳು ಮತ್ತು ಆಕೆಯ ಪ್ರಿಯಕರನನ್ನು ತಂದೆ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ​ನಲ್ಲಿ ನಡೆದಿದೆ.

ಇಬ್ಬರನ್ನೂ ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾನೆ ಬಳಿಕ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸದ್ಯ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಘಟನೆ ಬಿಲ್ಸಿ ಪೊಲೀಸ್​ ಠಾಣೆ ವ್ಯಾಪ್ತಿಯ ಪರೌಲಿ ಗ್ರಾಮದಲ್ಲಿ ನಡೆದಿದೆ.  ಇಲ್ಲಿ ವಾಸವಿರುವ 20 ವರ್ಷದ ಯುವತಿ ತನ್ನ ಜಾತಿಯವನೇ ಆದ ಯುವಕನನ್ನು ಪ್ರೀತಿಸುತ್ತಿದ್ದಳು.

ತಡರಾತ್ರಿ ಇಬ್ಬರೂ ಭೇಟಿಯಾಗಲು ಮುಂದಾಗಿದ್ದರು, ಆಕೆ ಯುವಕನ ಮನೆಗೆ ಹೋಗಿದ್ದಳು. ಅಷ್ಟರಲ್ಲಿ ಯುವತಿ ತಂದೆಗೆ ವಿಷಯ ತಿಳಿದುಬಂದಿತ್ತು. ಹುಡುಗಿಯ ತಂದೆ ಅಲ್ಲೇ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ, ಬಳಿಕ ಕುಟುಂಬದವರ ಜತೆ ಸೇರಿ ಹರಿತವಾದ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾರೆ.

ಯುವತಿ ತಂದೆ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ, ಯುವಕನ ಕುಟುಂಬದವರು ದೂರು ದಾಖಲಿಸಿದ್ದಾರೆ. ಪೋಷಕರು ಹಾಗೂ ಕುಟುಂಬದ ಮೂವರು ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular