ಮೈಸೂರು: ಮೈಸೂರಿನ ಎನ್.ಆರ್.ಮೊಹಲ್ಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿರುವ ಸೆಕ್ರೆಟರಿಯೇಟ್ ಪ್ರಾಕ್ಟೀಸ್ ವಿಭಾಗದ ವಿದ್ಯಾರ್ಥಿನಿ ಎಸ್.ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು.
ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ ಎಸ್ ರಕ್ಷಿತಾ ಅವರ ಸಾಧನೆಯನ್ನು ತರಬೇತಿ ಸಂಸ್ಥೆಯ ಪ್ರಭಾರ ಉಪ ಪ್ರಾಂಶುಪಾಲರಾದ ಬೋಪಯ್ಯ, ತರಬೇತಿ ಅಧಿಕಾರಿ ನಾಗೇಶ್ ಹಿರಿಯ ತರಬೇತಿ ಅಧಿಕಾರಿ ಜಿ.ಎಸ್.ಸುಮತಿ ಅವರು ಶ್ಲಾಘಿಸಿ ರಕ್ಷಿತಾ ಅವರ ಸಾಧನೆ ಇತರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮಾದರಿಯಾಗಬೇಕು ಎಂದು ಹೇಳಿದರು.