Saturday, April 19, 2025
Google search engine

Homeಸ್ಥಳೀಯರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಮೂವರಿಗೆ ಕರಾಮುವಿ ಗೌರವ ಡಾಕ್ಟರೇಟ್

ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಮೂವರಿಗೆ ಕರಾಮುವಿ ಗೌರವ ಡಾಕ್ಟರೇಟ್

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು, ಶಿಕ್ಷಣ ತಜ್ಞರಾದ ಎನ್.ರಾಮಚಂದ್ರಯ್ಯ ಹಾಗೂ ವೆಂಕಟ ಲಕ್ಷ್ಮಿನರಸಿಂಹರಾಜು ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ (ಡಿ.ಲಿಟ್) ನೀಡಲಾಗುವುದು ಎಂದು ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಮಾಹಿತಿ ನೀಡಿದರು.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜುಲೈ 2ರಂದು ಮೈಸೂರಿನ ಘಟಿಕೋತ್ಸವ ಭವನದಲ್ಲಿ 18ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು, ಅಂದು  ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರಿಗೆ  ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ನೀಡಿದರು. 

ಗೌರವ ಡಾಕ್ಟರೇಟ್ ಗೆ ಆಯ್ಕೆಯಾಗಿರುವ ವಿಷಯವನ್ನು ರಾಷ್ಟ್ರಪತಿ ಅವರಿಗೆ ತಿಳಿಸಲಾಗಿದೆ. ಜುಲೈ 2 ರಂದು ನಡೆಯುವ ವಾರ್ಷಿಕ ಘಟಿಕೋತ್ಸವಕ್ಕೆ ಅವರನ್ನು ಆಹ್ವಾನಿಸಲಾಗಿದೆ. ಆ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರು ಬಾರದಿದ್ದರೆ, ಜುಲೈ 3 ರಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ  ದ್ರೌಪದಿ ಮುರ್ಮು ಅವರಿಗೆ ಬೆಂಗಳೂರಿನ ರಾಜಭವನದಲ್ಲಿ ಪ್ರದಾನ ಮಾಡಲಾಗುವುದು ಎಂದರು.

ಘಟಿಕೋತ್ಸವದಲ್ಲಿ ಒಬ್ಬ ಮಹಿಳೆಗೆ ರಾಜ್ಯ ಶಾಸ್ತ್ರದಲ್ಲಿ ಪಿಎಚ್ ಡಿ, 44 ಚಿನ್ನದ ಪದಕ, 27 ನಗದು ಬಹುಮಾನ ನೀಡಲಾಗುವುದು. ಒಟ್ಟು 8,722 ಅಭ್ಯರ್ಥಿಗಳು ವಿವಿಧ ಪದವಿ ಪಡೆಯಲು ಅರ್ಹರಾಗಿದ್ದಾರೆ. ಇವರಲ್ಲಿ 5,241 ಮಹಿಳೆಯರು ಹಾಗೂ 3,481 ಪುರುಷರು ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular