Sunday, January 18, 2026
Google search engine

Homeಸ್ಥಳೀಯಹೊಸಕೋಟೆ ಕ್ಲಸ್ಟರ್‌ನಲ್ಲಿ ವರ್ಗಾವಣೆಗೊಂಡ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸಮಾರಂಭ

ಹೊಸಕೋಟೆ ಕ್ಲಸ್ಟರ್‌ನಲ್ಲಿ ವರ್ಗಾವಣೆಗೊಂಡ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸಮಾರಂಭ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸರ್ಕಾರಿ ವೃತ್ತಿಯಲ್ಲಿ ನಿವೃತ್ತಿ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗುವ ಸಂದರ್ಭದಲ್ಲಿ ಸಿಗುವ ಗೌರವ ಸನ್ಮಾನವು ಕರ್ತವ್ಯದಲ್ಲಿನ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ಕೆ.ಆರ್.ನಗರ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ದಾಸಪ್ಪ ಅಭಿಪ್ರಾಯ ಪಟ್ಟರು.

ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿ ವರ್ಗಾಣೆಗೊಂಡ ಸಿ.ಅರ್.ಪಿ ಮತ್ತು ಶಿಕ್ಷಕರು ಹಾಗೂ ನಿವೃತ್ತಿ ಶಿಕ್ಷಕರಿಗೆ ಏರ್ಪಡಿಸಿದ್ದ ಸನ್ಮಾನದ ಬಿಳ್ಕೋಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರವು ಎಲ್ಲಾ ಕ್ಷೇತ್ರಗಳಿಗಿಂತ ಬಹಳ ಪವಿತ್ರವಾದ ಕ್ಷೇತ್ರವಾಗಿ ಇಲ್ಲಿ ಕರ್ತವ್ಯ ನಿರ್ಹಹಿಸುವ ಶಿಕ್ಷಕರು ನೂರಾರು ಮಂದಿಗೆ ಶಿಕ್ಷಣ ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಅಂತಹ ಶಿಕ್ಷಕರನ್ನುವಿದ್ಯಾರ್ಥಿಗಳು ಮತ್ತು ಪೋಷಕ ವರ್ಗ ಸಮಾಜದಲ್ಲಿ ಸದಾ ಗೌರವಿಸುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಇಸಿಓ ಜನಾರ್ಧನ್, ಸಿ.ಆರ್.ಪಿ. ರಾಘವೇಂದ್ರ ಅವರು
ವರ್ಗಾವಣೆಗೊಂಡ ಸಿ.ಆರ್.ಪಿ.ಗಳಾದ ಸಿ.ಎನ್.ಪ್ರಭು, ಧರ್ಮರಾಜ್,
ಶಿಕ್ಷಕರಾದ ಪ್ರಕಾಶ್,ಸುಮಾಮಣಿ, ಕಾಂತರಾಜ್, ನಿವೃತ್ತ ಶಿಕ್ಷಕರಾದ ಚಿಕ್ಕಕೊಪ್ಪಲು ಪುರುಷೋತ್ತಮ್, ಸುರೇಶ್ ಅವರನ್ನು ಸನ್ಮಾನಿಸಿದರು.
ಅಲ್ಲದೇ ಕ್ಲಸ್ಟರ್ ಗೆ ಹೊಸದಾಗಿ ಅಗಮಿಸಿದ ಶಿಕ್ಷಕರಾಗಿ ಬಂದ ಶಿವಮೂರ್ತಿ, ನಂಜುಂಡ, ಅರುಣಕುಮಾರ ಇವರಿಗೆ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಹೊಸಕೋಟೆ ಪಿ.ಎಂ. ಶ್ರೀ ಶಾಲೆಯ ಮುಖ್ಯ ಶಿಕ್ಷಕರಾದ ಹೆಬ್ಬಾಳುರವಿ, ಶಿಕ್ಷಕರಾದ ಶ್ರೀರಾಮಪುರ ಶ್ರೀನಿಧಿ, ಗಂಧನಹಳ್ಳಿನಾಗರಾಜು, ಅನುಸೂಯ, ಗುಡದಯ್ಯ ಕುರುಬರ , ಭಗೀರಥ, ನಾಗೇಶ್, ಸುಧೀರ್, ವಡ್ಡರಕೊಪ್ಪಲು ರೇವಣ್ಣ, ಪ್ರಸನ್ನ, ಚಂದ್ರಕಲಾ, ಶ್ರೀನಿವಾಸ,ಚೈತ್ರಾoಜಲಿ,ಮಲ್ಲೇಗೌಡ ಜಲೆಂದ್ರ, ಕಿರಣ್, ಈಶ್ವರ್, ನಿತ್ಯಾoಬಿಕ, ರಂಗನಾಥ್,ಅಂಬೇಡ್ಕರ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಮಹದೇವಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು .

RELATED ARTICLES
- Advertisment -
Google search engine

Most Popular