Friday, April 18, 2025
Google search engine

Homeರಾಜ್ಯಸುದ್ದಿಜಾಲಆತ್ಮೀಯ ಸ್ನೇಹಬಳಗದ ವತಿಯಿಂದ ಡಾ.ದಿವಾಕರ್ ಮತ್ತು ಡಾ.ಬಸವರಾಜು ರವರಿಗೆ ಸನ್ಮಾನ

ಆತ್ಮೀಯ ಸ್ನೇಹಬಳಗದ ವತಿಯಿಂದ ಡಾ.ದಿವಾಕರ್ ಮತ್ತು ಡಾ.ಬಸವರಾಜು ರವರಿಗೆ ಸನ್ಮಾನ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಡಾ.ದಿವಾಕರ್ ಮತ್ತು ಡಾ.ಬಸವರಾಜು ರವರಿಗೆ ಕೆ.ಆರ್.ನಗರ ಅತಿಥಿ ಉಪನ್ಯಾಸಕರು ಮತ್ತು ಅವರ ಆತ್ಮೀಯ ಸ್ನೇಹಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಪಟ್ಟಣದಲ್ಲಿ ನಡೆದ ಸರಳ ಸಮಾರಂಭ ಕಾರ್ಯಕ್ರಮದಲ್ಲಿ ಡಾ.ದಿವಾಕರ್ ರವರು ಇತಿಹಾಸದ ವಿಷಯದಲ್ಲಿ ಮತ್ತು ಡಾ.ಬಸವರಾಜು ರವರು ರಾಜ್ಯಶಾಸ್ತçದ ವಿಷಯದಲ್ಲಿ ಪಿಹೆಚ್.ಡಿ ಪದವಿ ಪಡೆದ ಹಿನ್ನಲೆಯಲ್ಲಿ ಅವರನ್ನು ಅತಿಥಿ ಉಪನ್ಯಾಸಕರು ಮತ್ತು ಅವರ ಆತ್ಮೀಯ ಒಂದೇ ಮನಸ್ಸುಳ್ಳ ಸ್ನೇಹ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ವೇಣುಗೋಪಾಲ್ ಈ ವಯಸ್ಸಿನಲ್ಲಿ ಡಾ.ದಿವಾಕರ್ ಮತ್ತು ಡಾ.ಬಸವರಾಜು ರವರು ತಮ್ಮ ಉದ್ಯೋಗದ ಜೊತೆ ಜೋತೆ ಪಿಹೆಚ್‌ಡಿ ಪದವಿಯನ್ನು ಮುಗಿಸುವುದರ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ ಇವರು ಬಡಕುಟುಂಬದಿoದ ಈ ಹಂತಕ್ಕೆ ಬಂದು ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿ ಹಲವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಇದೇ ರೀತಿ ಮುಂದೆ ಕೂಡ ನಿಮ್ಮ ಜ್ಞಾನವನ್ನು ಇನ್ನು ಹತ್ತಾರು ಜನಗಳಿಗೆ ಹಂಚುವುದರ ಮೂಲಕ ಅವರ ಬಾಳಿಗೆ ನೆರವಾಗುವುದರ ಮೂಲಕ ಇತರರ ಬಾಳಿಗೆ ಬೆಳಕಾಗಲಿ ಎಂದು ಶುಭಹಾರೈಸಿದರು.

ಅತಿಥಿ ಉಪನ್ಯಾಸಕ ಕೆ.ಎಲ್.ರಮೇಶ್ ಮಾತನಾಡಿ ನನ್ನ ಸ್ನೇಹಿತರಾದ ಡಾ.ದಿವಾಕರ್ ಮತ್ತು ನನ್ನ ನೆಚ್ಚಿನ ವಿದ್ಯಾರ್ಥಿಯಾದ ಡಾ.ಬಸವರಾಜು ರವರಿಗೆ ಅತಿಥಿ ಉಪನ್ಯಾಸಕರ ಬಳಗ ಮತ್ತು ಅತ್ಮೀಯ ಬಳಗದ ವತಿಯಿಂದ ಸನ್ಮಾನಿಸುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ ಇಂತಹ ಹತ್ತು ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬರಲಿ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಿರಿ ನಿಮ್ಮ ಜೊತೆ ಸದಾ ನಾವು ಇರುತ್ತೇವೆ. ತಾವು ಬೆಳೆಯುವುದರ ಜೊತೆಗೆ ತಮ್ಮ ಜೊತೆಯಲ್ಲಿರುವವರನ್ನು ಬೆಳಸಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಕೆ.ಎಲ್.ಜಗದೀಶ್ ಅತಿಥಿ ಉಪನ್ಯಾಸಕರಾದ ಕೆ.ಎಲ್.ರಮೇಶ್, ಹೆಚ್.ಡಿ.ರಾಘವೇಂದ್ರ, ಮಂಜುನಾಥ್, ಸುರೇಶ್, ಬಿ.ಸಿ.ಕುಮಾರ್, ರಂಗನಾಥ್, ಗೌರೀಶ್, ರವೀಂದ್ರ, ಸ್ಪಿನ್‌ಕೃಷ್ಣ, ಜಗದೀಶ್, ಹರೀಶ್, ರವಿ, ಸತೀಶ್, ಯೋಗೇಶ್, ನಿಂಗರಾಜು, ಶೋಯಿಬ್, ಆನಂದ್, ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular