Tuesday, April 22, 2025
Google search engine

Homeಅಪರಾಧಹಾಪ್ ಕಾಮ್ಸ್ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಹಾಪ್ ಕಾಮ್ಸ್ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೋಲಾರ: ಹಾಪ್ ಕಾಮ್ಸ್ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಶುಕ್ರವಾರ ಕೋಲಾರ ತಾಲ್ಲೂಕು ಬಸವನತ್ತ ಗ್ರಾಮದ ಬಳಿ ನಡೆದಿದೆ.

ಬಸವನತ್ತ ಗ್ರಾಮದ ವರ್ಷದ ಶ್ರೀನಿವಾಸಗೌಡ (೫೯) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಬಸವನತ್ತ ಗ್ರಾಮದ ಹೊರವಲಯದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀನಿವಾಸಗೌಡ ಕಳೆದ 30 ವರ್ಷಗಳಿಂದ ಕೋಲಾರ ನಗರದ ಟೇಕಲ್ ರಸ್ತೆಯ ಹಾಪ್ ಕಾಮ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಹದಿನೈದು ಸಾವಿರ ಸಂಬಳ‌ ನೀಡುತ್ತಿದ್ದರು. ಆ ಸಂಬಳ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ ಅನ್ನೋ ಬೇಸರ ಇತ್ತು, ಅದರ ಜೊತೆಗೆ ಇತ್ತೀಚೆಗೆ ಮೇಲಾಧಿಕಾರಿಗಳು ಟಾರ್ಗೆಟ್ ಕೊಟ್ಟು ವ್ಯಾಪಾರ ಮಾಡುವಂತೆ ಒತ್ತಾಯ ಮಾಡುತ್ತಿದ್ದು, ಟಾರ್ಗೆಟ್ ಮಾಡದೆ ಹೋದಾಗ ಸಂಬಳದಲ್ಲಿ‌ ಹಣ ಕಟ್ ಮಾಡುತ್ತಿದ್ದರು. ಇದರಿಂದ ಹಣದ ಸಮಸ್ಯೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ.

ಅಲ್ಲದೆ ಇತ್ತೀಚೆಗೆ ತೋಟಗಾರಿಕೆ ಹಾಗೂ ಹಾಪ್ ಕಾಮ್ಸ್ ಅಧಿಕಾರಿಗಳು ತಿಂಗಳಿಗೆ ಒಂದು ಲಕ್ಷ ಟಾರ್ಗೆಟ್ ನಿಗಧಿ ಮಾಡಿದ್ರು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕುಟುಂಬ ಸದಸ್ಯರ ಆರೋಪವಾಗಿದೆ. ಇನ್ನೂ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular