ಹೊಸೂರು: ಕೆ.ಆರ್.ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು 200 ಎಕರೆ ತೋಟದಲ್ಲಿ ಕಂಡು ಬಂದ ಕಪ್ಪು ತಲೆ ಹುಳು ರೋಗ ಬಾದೆಗೆ ಒಳಗಾಗಿದ್ದು, ಇದನ್ನು ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಕ್ರಮಕೈಗೊಂಡಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಟಿ.ಎಸ್.ಭಾರತಿ ಹೇಳಿದರು
ಕೆ.ಆರ್.ನಗರ ತಾಲೂಕಿನ ಡಿ.ಕೆ.ಕೊಪ್ಪಲು ಗೇಟ್ ಬಳಿ ತೋಟಗಾರಿಕೆ ಇಲಾಖೆ ಮತ್ತು ಆರ್ಕೇಶ್ವರ ಸ್ವಾಮಿ ತೋಟಗಾರಿಕೆ ಉತ್ಪಾದಕರ ಕಂಪನಿ ವತಿಯಿಂದ ಆಯೋಜಿಸಿದ್ದ ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗೂ ಸುಧಾರಿತ ಬೇಸಾಯದ ತರಬೇತಿ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಅದ ಪರಿಣಾಮವಾಗಿ ಈ ಹುಳು ಬಾದೆ ಕಾಣಿಸಿಕೊಂಡಿದ್ದು, ಈಗಾಲೇ ಈ ಹುಳು ಬಾದೆ ಕಂಡು ಬಂದು ತೋಟಗಳಿಗೆ ಅಧಿಕಾರಿಗಳು ಬೇಟಿ ನೀಡಿ ಇವುಗಳ ನಿಯಂತ್ರಣಕ್ಕೆ ತೋಟಗಾರಿಕೆ ತಜ್ಞರಿಂದ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಯಲೆಚನಹಳ್ಳಿ ತೋಟಗಾರಿಕೆ ಮಹಾ ವಿದ್ಯಾಲಯದ ಬೆಳೆಗಳ ತಜ್ಞ ಡಾ.ಆರ್.ಸಿದ್ದಪ್ಪ ಮಾತನಾಡಿ ಹೈಬ್ರಿಡ್ ಮತ್ತು ನಾಟಿಗಳ ತೆಂಗಿನ ಗಿಡಗಳನ್ನು ನಾಟಿ ಮಾಡುವಾಗ ಉತ್ತಮ ಗುಣಮಟ್ಟದ ಗಿಡಗಳನ್ನು ಖರಿದಿಸುವುದು ಪ್ರಮುಖವಾಗಿದ್ದು ಜೊತಗೆ ಗೊಬ್ಬರ ಬಳಕೆ ಮತ್ತು ಕೀಟಗಳ ನಿಯಂತ್ರಣಕ್ಕೆ ಔಷದ ಬಳಕೆ ಮಾಡುವಾಗ ತೋಟಗಾರಿಕೆ ಇಲಾಖೆಯವರ ಮಾರ್ಗದರ್ಶನ ಪಡೆದು ಕೊಳ್ಳಬೇಕು ಇದರಿಂದ ತೆಂಗುವಿಗೆ ಬರುವ ರೋಗವನ್ನು ನಿಯಂತ್ರಣ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಯಲೆಚನಹಳ್ಳಿ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರತಜ್ಞ ಡಾ.ಮಂಜುನಾಥ್ ,ಸಸ್ಯ ಕೀಟ ಶಾಸ್ತ್ರ ತಜ್ಞ ಡಾ.ಮುತ್ತುರಾಜು ಅವರು ಮಣ್ಣಿನ ಫಲವತ್ತತೆ ಕಾಪಾಡುವುದು, ಸಾಯವಯವ ಗೊಬ್ಬರ-ಔಷದಿಗಳ ಉತ್ಪಾದನೆ ಮಾಡಿಕೊಳ್ಳುದು,ಅಂತರ್ ಬೆಳೆಗಳ ಬೇಸಾಯ, ಕೀಟಗಳ ಹತೋಟಿ, ರಾಸಾಯನಿಕ ಔಷದಿಗಳ ಬಳಕೆಯ ಕುರಿತು ರೈತರಿಗೆ ವಿವರಣೆ ನೀಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಹೆಬಾಳು ಸುಜಯ್, ಮುರುಳಿ, ಡಿ.ಕೆ.ಕೊಪ್ಪಲು ಕೆ.ಎಸ್.ನಿಂಗೇಗೌಡ, ರಾಮಚಂದ್ರೇಗೌಡ, ತೆಂಗಿನ ಬೆಳೆಯ ಕುರಿತು ಮಾಹಿತಿ ಹಂಚಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ಆರ್.ನಗರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್, ಹೆಬ್ಬಾಳು ಸಹಾಯ ತೋಟಗಾರಿಕೆ ಅಧಿಕಾರಿ ಎಚ್.ಎಸ್. ರಾಘವೇಂದ್ರ ,ಚುಂಚನಕಟ್ಟೆ ಸಹಾಯಕ ತೋಟಗಾರಿಕೆ ಅಧಿಕಾರಿ ಮಳಲಿಹರೀಶ್,ಆರ್ಕೇಶ್ವರ ಸ್ವಾಮಿ ತೋಟಗಾರಿಕೆ ಉತ್ಪಾದಕರ ಕಂಪನಿಯ ಶಿವು, ಇಪ್ಕೋ ಕಂಪನಿಯ ಕ್ಷೇತ್ರಧಿಕಾರಿ ಮನೋಜ್, ಹೆಬ್ಬಾಳು ಗ್ರಾ.ಪಂ.ಮಾಜಿ ಅಧ್ಯಕ್ಷ ಪುಟ್ಟೇಗೌಡ,ರೈತರಾದ ಹೆಬ್ಬಾಳು ಎಚ್.ಕೆ. ಸುಜಯ್ ಎಚ್.ಎಂ.ಉದಯ್, ಪುನೀತ್ ಕುಮಾರ್, ಶಿವಶಂಕರ್, ಅಮರ್ ಗೌಡ, ಶ್ರೀನಿವಾಸ್, ಜ್ಞಾನರಾಜ್, ಶಿವು, ರವಿ, ಮಂಜು, ಸುರೇಶ್, ಗುರು, ಹಿರಣ್ಣಯ್ಯ, ಮಂಜು, ಶ್ರೀರಾಮಪುರ ಶ್ರೀನಿವಾಸ್, ಕೊಗಿಲೂರು ಶ್ರೀಶೈಲ, ರೈತ ಅನುವುಗಾರ ಹರೀಶ್ ಇದ್ದರು.